ಸದಸ್ಯರು ಐಫೋನ್-ಟ್ಯಾಬ್ ವಾಪಸ್ ಕೊಡದಿದ್ದರೆ ಚುನಾವಣೆಗೆ ಅಡ್ಡಿ: ಮಂಜುನಾಥ್ ಪ್ರಸಾದ್

Update: 2020-11-17 17:43 GMT

ಬೆಂಗಳೂರು, ನ.17: ಬಿಬಿಎಂಪಿಯಿಂದ ಈ ಹಿಂದೆ ಕೊಟ್ಟಿರುವ ಐಫೋನ್ ಟ್ಯಾಬ್ ವಾಪಸ್ ಕೊಡದೆ ಹೋದರೆ ಮುಂಬರುವ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಸದಸ್ಯರಿಗೆ ಅಡ್ಡಿಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಕೌನ್ಸಿಲ್‍ನ ಕಡತಗಳನ್ನು ಮತ್ತು ನಿರ್ಣಯಗಳನ್ನು ನೋಡಲು ಬಿಬಿಎಂಪಿ ಸದಸ್ಯರಿಗೆ ಟ್ಯಾಬ್ ನೀಡಲಾಗಿತ್ತು. ಆದರೆ, ಅಧಿಕಾರಾವಧಿ ಮುಕ್ತಾಯಗೊಂಡರೂ ಟ್ಯಾಬ್ ವಾಪಸ್ ನೀಡಿಲ್ಲ. ಹೀಗಾಗಿ ಟ್ಯಾಬ್ ವಾಪಸ್ ನೀಡದೆ ಹೋದರೆ ಚುನಾವಣೆ ಸ್ಪರ್ಧಿಸಲು ತೊಂದರೆ ಆಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ 198 ಸದಸ್ಯರ ಪೈಕಿ 196 ಸದಸ್ಯರಿಗೆ ಐಫೋನ್ ಟ್ಯಾಬ್ ನೀಡಲಾಗಿತ್ತು. ಸದ್ಯ ಈಗ ಕೇವಲ 18 ಜನ ಸದಸ್ಯರು ಟ್ಯಾಬ್ ವಾಪಸ್ ಮಾಡಿದ್ದಾರೆ. ಉಳಿದವರು ಶೀಘ್ರದಲ್ಲೇ ವಾಪಸ್ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಅಡ್ಡಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News