ಗೋ ಸಂಪುಟ ರಚಿಸಲು ಮುಂದಾದ ಮಧ್ಯಪ್ರದೇಶ ಸರಕಾರ

Update: 2020-11-18 05:30 GMT

ಭೋಪಾಲ್: ರಾಜ್ಯದಲ್ಲಿ ಜಾನುವಾರುಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ರಾಜ್ಯ ಸರಕಾರ ಗೋ ಸಂಪುಟ (ಕೌ ಕ್ಯಾಬಿನೆಟ್)ರಚಿಸಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.

ಪಶು ಸಂಗೋಪನೆ, ಅರಣ್ಯ, ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಹಾಗೂ ರೃತ ಕಲ್ಯಾಣ ಇಲಾಖೆಯನ್ನು ಗೋ ಸಂಪುಟದಲ್ಲಿ ಸೇರಿಸಲಾಗುವುದು. ಗೋ ಸಂಪುಟದ  ಮೊದಲ ಸಭೆ ನವೆಂಬರ್ 22ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಚೌಹಾಣ್ ಹೇಳಿದ್ದಾರೆ.

ಆದಾಗ್ಯೂ ಮಧ್ಯಪ್ರದೇಶ ಸರಕಾರವು ಗೋ ಸಂಪುಟದ ಅಧಿಕಾರ ಹಾಗೂ ಜವಾಬ್ದಾರಿಗಳ ಹೆಚ್ಚಿನ ವಿವರಗಳನ್ನು ಇನ್ನಷ್ಟೇ ನೀಡಬೇಕಾಗಿದೆ.

ಲವ್ ಜಿಹಾದ್ ವಿರುದ್ಧ ಕಾನೂನು ತರಲು ರಾಜ್ಯ ಸರಕಾರ ಮುಂದಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ ಒಂದು ದಿನ ನಂತರ ಈ ನಿರ್ಧಾರ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News