ಲಂಕಾ ಆಟಗಾರ ನುವಾನ್ ವಿರುದ್ಧ ಫಿಕ್ಸಿಂಗ್ ಆರೋಪ ದೃಢ

Update: 2020-11-19 18:38 GMT

ದುಬೈ: ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಈಗಾಗಲೇ ಅಮಾನತು ಗೊಂಡಿರುವ ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಬೌಲಿಂಗ್ ತರಬೇತುದಾರ ನುವಾನ್ ಜೊಯ್ಸಿ ಅವರು ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯಡಿ ಮೂರು ಆರೋಪಗಳಿಗೆ ಸಂಬಂಧಿಸಿ ತಪ್ಪಿತಸ್ಥರೆಂದು ಸ್ವತಂತ್ರ ನ್ಯಾಯಮಂಡಳಿಯು ನಡೆಸಿದ ವಿಚಾರಣೆಯಿಂದ ದೃಢಪಟ್ಟಿರುವುದಾಗಿ ಐಸಿಸಿ ಗುರುವಾರ ತಿಳಿಸಿದೆ.

ಜೊಯ್ಸರನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಸ್ವತಂತ್ರ ನ್ಯಾಯಮಂಡಳಿಯು ಅವರ ವಿರುದ್ಧದ ಆರೋಪದ ಬಗ್ಗೆ ವಿಚಾರಣೆ ನಡೆಸಿದ ಬಳಿಕ ನುವಾನ್ ತಪ್ಪಿತಸ್ಥರೆಂದು ಸಾಬೀತಾಗಿತ್ತು.

 ಯುಎಇಯಲ್ಲಿ ಟ್ವೆಂಟಿ -20 ಲೀಗ್ ಪಂದ್ಯದ ಸಮಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಆರೋಪದಲ್ಲಿ ಜೊಯ್ಸಾರನ್ನು ಮೇ 2019ರಲ್ಲಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು.

  ಶ್ರೀಲಂಕಾ ಪರ 30 ಟೆಸ್ಟ್ ಮತ್ತು 95 ಏಕದಿನ ಪಂದ್ಯಗಳನ್ನು ಆಡಿದ ಜೊಯ್ಸ್ ಅವರನ್ನು 2015ರ ಸೆಪ್ಟಂಬರ್‌ನಲ್ಲಿ ಶ್ರೀಲಂಕಾದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿತ್ತು. ಅವರು ಶ್ರೀಲಂಕಾ ಕ್ರಿಕೆಟ್‌ನ ಉನ್ನತ ಪ್ರದರ್ಶನ ಕೇಂದ್ರದಲ್ಲಿ ಕೆಲಸ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News