ಬೆಂಗಳೂರಿನಿಂದ ಶಿರಡಿಗೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಸಂಚಾರ

Update: 2020-11-20 18:35 GMT

ಬೆಂಗಳೂರು, ನ.20: ಕೆಎಸ್ಆರ್‌ಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಶಿರಡಿ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಸಾರಿಗೆಯನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಕೆಎಸ್ಆರ್‌ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು-ಶಿರಡಿ ವಯಾ ಚಿತ್ರದುರ್ಗ, ಹುಬ್ಬಳಿ ಮತ್ತು ಪೂನಾ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಸಾರಿಗೆಯನ್ನು ನ.20ರಿಂದ ಪುನರಾರಂಭಿಸುತ್ತಿದೆ. ಪ್ರತಿದಿನ ಮಧ್ಯಾಹ್ನ 1ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ಶಿರಡಿ ತಲುಪುತ್ತದೆ. ಪ್ರಯಾಣ ದರ ಒಬ್ಬರಿಗೆ 1600 ರೂ.ಆಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News