ಆನ್‍ಲೈನ್ ಬೆಟ್ಟಿಂಗ್‍ಗೆ ಟರ್ಫ್ ಕ್ಲಬ್ ಅವಕಾಶ

Update: 2020-11-21 16:23 GMT

ಬೆಂಗಳೂರು, ನ. 21: ರಾಜಧಾನಿಯಲ್ಲಿ ಚಳಿಗಾಲದ ಕುದುರೆ ರೇಸುಗಳ ನಾಲ್ಕನೇ ದಿನವಾದ ಶನಿವಾರದಿಂದ ಆನ್‍ಲೈನ್ ಮೂಲಕ ಬೆಟ್ಟಿಂಗ್ ಕಟ್ಟಿ ಆಟವಾಡಲು ಟರ್ಫ್ ಕ್ಲಬ್ ಅವಕಾಶ ನೀಡಿದೆ. 

ಕರ್ನಾಟಕದಲ್ಲಿ ರೇಸಿಂಗ್ ಪ್ರಿಯರು ತಾವಿರುವ ಸ್ಥಳದಿಂದಲೇ ಕ್ಲಬ್‍ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಆನ್‍ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಬಳಸಲು ಟರ್ಫ್‍ಕ್ಲಬ್‍ನ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು 2020 ರ ನವೆಂಬರ್ 21 ರ ಶನಿವಾರದಿಂದ ಆನ್‍ಲೈನ್ ಬೆಟ್ಟಿಂಗ್ ಆಡಬಹುದಾಗಿದೆ. (www.bangaloreraces.com) BET ONLINE ಅಥವಾ https://play.bangaloreraces.com ಆಯ್ಕೆ ಮಾಡುವ ಮೂಲಕ ಬೆಟ್ಟಿಂಗ್‍ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ನೋಂದಣಿ ಪ್ರಕ್ರಿಯೆಯನ್ನು ಶುಕ್ರವಾರದಿಂದಲೇ ಪ್ರಾರಂಭವಾಗಿದ್ದು, ಹೆಚ್ಚಿನ ವಿವರಗಳಿಗೆ www.bangaloreraces.com ಅಥವಾ ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ಸಹಾಯವಾಣಿ: 080-22140352/53 ಕ್ಕೆ ಸಂಪರ್ಕಿಸಬಹುದೆಂದು ಬಿಟಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News