ಆನ್‍ಲೈನ್‍ನಲ್ಲಿ ಉಚಿತ ಭಾಷಾಂತರ ಕೋರ್ಸ್ ಗೆ ಅರ್ಜಿ ಆಹ್ವಾನ

Update: 2020-11-22 17:48 GMT

ಬೆಂಗಳೂರು, ನ.22: ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಆನ್ ಲೈನ್ ಮೂಲಕ ಆರು ವಾರಗಳ ಉಚಿತ ಭಾಷಾಂತರ ಕೋರ್ಸ್‍ಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಸಾಹಿತ್ಯ, ಪತ್ರಿಕೋದ್ಯಮ, ವಿಜ್ಞಾನ ಲೇಖನ, ವಾಣಿಜ್ಯ/ಜಾಹಿರಾತುಗಳು, ಸಮಾಜ-ವಿಜ್ಞಾನಗಳ ಬರಹ ಹೀಗೆ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾಷಾಂತರದ ಬಗ್ಗೆ ತಜ್ಞರು ಅರಂಭಿಕ ಹಂತದ ತರಬೇತಿಯನ್ನು ನೀಡಲಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ತರಗತಿಗಳು ನಡೆಯಲಿದ್ದು, ಆನ್ ಲೈನ್ ಕೋರ್ಸ್ ನಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ಪ್ರಾಧಿಕಾರದ ವೆಬ್ ಸೈಟ್ : www.kuvempubhashabharathi.org ನಲ್ಲಿರುವ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News