ಯಶಸ್ಸು ಕಂಡ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಚಾರ್ಜಿಂಗ್ ವ್ಯವಸ್ಥೆ

Update: 2020-11-22 17:49 GMT

ಬೆಂಗಳೂರು, ನ.22 : ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಸ್ವಲ್ಪವೂ ಮಾಲಿನ್ಯ ಉಂಟುಮಾಡದ ಚಾರ್ಜಿಂಗ್ ವ್ಯವಸ್ಥೆಯನ್ನು ಬೆಂಗಳೂರಿನ ತನ್ನ ಒಂದು ಇಂಧನ ಮಾರಾಟ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ, ಯಶಸ್ಸು ಕಂಡಿದೆ.

ಈ ವ್ಯವಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಯನ್ನು ಸೌರವಿದ್ಯುತ್‍ನಿಂದ ಚಾರ್ಜ್ ಮಾಡಲಾಗುತ್ತದೆ. ಹಾಗಾಗಿ, ಇಡೀ ಪ್ರಕ್ರಿಯೆಯಲ್ಲಿ ಮಾಲಿನ್ಯ ಉಂಟಾಗುವ ಪ್ರಮೇಯವೇ ಇರುವುದಿಲ್ಲ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ಈ ವ್ಯವಸ್ಥೆಯು ಮೂರು ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿ ವಾಹನಗಳ ಬ್ಯಾಟರಿಯನ್ನು ಸೌರವಿದ್ಯುತ್ತಿನಿಂದ ಚಾರ್ಜ್ ಮಾಡಲಾಗುತ್ತದೆ, ಗ್ರಿಡ್‍ಅನ್ನು ಮೇಲ್ದರ್ಜೆಗೆ ಏರಿಸಬೇಕಾದ ಪ್ರಮೇಯ ಇರುವುದಿಲ್ಲ, ಈ ವ್ಯವಸ್ಥೆಯು ಗ್ರಿಡ್ ಚೆನ್ನಾಗಿರುವಂತೆಯೂ ನೋಡಿಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ.

ನಾವು ಈಗಾಗಲೇ 54 ಚಾರ್ಜಿಂಗ್ ಕೇಂದ್ರಗಳನ್ನು ಬೇರೆ ಬೇರೆ ಕಂಪನಿಗಳ ಜೊತೆಗೂಡಿ ಆರಂಭಿಸಿದ್ದೇವೆ. ವಿದ್ಯುತ್ ಚಾಲಿತ ವಾಹನಗಳಿಗೆ ವಿದ್ಯುತ್ ಪರಿಸರ ಸ್ನೇಹಿ ಮೂಲಗಳಿಂದಲೇ ಬರುವಂತೆ ಆಗಬೇಕು ಎಂಬುದು ನಮ್ಮ ಬದ್ಧತೆ ಎಂದು ಕಂಪನಿಯ ರಿಟೇಲ್ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿಗ್ಯಾನ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News