ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಸ್ವರಕ್ಷಣಾ ತರಬೇತಿ ಕಾರ್ಯಕ್ರಮ

Update: 2020-11-22 17:54 GMT

ಬೆಂಗಳೂರು, ನ.22: ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನಿರ್ವಾಹಕಿಯರು ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸ್ವರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬಿಎಂಟಿಸಿಯಲ್ಲಿ 2,900 ಮಹಿಳಾ ಉದ್ಯೋಗಿಗಳಿದ್ದು, ಡಿಸೆಂಬರ್ ನಲ್ಲಿ ಸ್ವರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ತರಬೇತಿಯು ಕೋರ್ಸ್ ರೂಪದಲ್ಲಿದ್ದು, ಪ್ರತಿದಿನ ಎರಡು ಗಂಟೆಗಳಂತೆ 21 ದಿನ ನಡೆಯಲಿದೆ. ಸಂಸ್ಥೆಯ ಪ್ರತಿಯೊಬ್ಬ ಮಹಿಳಾ ಸಿಬ್ಬಂದಿಯು ಭಾಗವಹಿಸಲಿದ್ದಾರೆ.

ಸ್ವರಕ್ಷಣಾ ತರಬೇತಿಯಲ್ಲಿ ಕರಾಟೆ, ಜೂಡೋ, ಸಮರ ಕಲೆಗಳು ಮತ್ತು ಲಿಂಗ ಸಂವೇದನೆ, ಸ್ವಯಂ ದೃಢೀಕರಣ, ಕಾನೂನು ಜ್ಞಾನ, ಸಮಾಲೋಚನಾ ಕೌಶಲ್ಯ ಮತ್ತು ಸಾರ್ವಜನಿಕ ಭಾಷಣದಂತಹ ಪ್ರಾಯೋಗಿಕ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News