ಟ್ರಂಪ್‌ಗೆ ಮತ್ತೆ ಹಿನ್ನಡೆ : ಜೋ ಬೈಡನ್ ಜಯ ದೃಢೀಕರಿಸಿದ ಮಿಚಿಗನ್

Update: 2020-11-24 03:39 GMT

ವಾಷಿಂಗ್ಟನ್ : ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬೈಡನ್ ಅವರು ಮಿಚಿಗನ್ ರಾಜ್ಯದಲ್ಲಿ ಟ್ರಂಪ್ ವಿರುದ್ಧ ಸಾಧಿಸಿರುವ ಜಯವನ್ನು ಮಿಚಗನ್ ಬೋರ್ಡ್ ಆಫ್ ಸ್ಟೇಟ್ ಕ್ಯಾನ್ವಾಸರ್ಸ್ ದೃಢೀಕರಿಸಿದೆ.

ಇದರಿಂದಾಗಿ ರಿಪಬ್ಲಿಕನ್ ಪಕ್ಷದವರಿಗೆ ಮರು ಎಣಿಕೆಗೆ ಆಗ್ರಹಿಸಲು ಮಾತ್ರ ಅವಕಾಶವಿದ್ದು, ಬೈಡನ್ ಈ ರಾಜ್ಯದಲ್ಲಿ ಜಯ ಸಾಧಿಸಿ 16 ಎಲೆಕ್ಟೋರಲ್ ಮತಗಳನ್ನು ಪಡೆದಂತಾಗಿದೆ. ಈ ಪ್ರಮಾಣೀಕರಣದ ಬಳಿಕ ಮಂಡಳಿ ಮತಗಳ ಮರು ಎಣಿಕೆಗೆ ಆದೇಶಿಸಿಲ್ಲ.

ಮಂಡಳಿಯ ಇಬ್ಬರು ರಿಪಬ್ಲಿಕನ್ ಪ್ರಚಾರಕರ ಪೈಕಿ ಆರನ್ ವಾನ್ ಲೆಂಗ್‌ವೆಲ್ಡ್ ಡೆಮಾಕ್ರಟಿಕ್ ಪಕ್ಷದ ಪರವಾಗಿ ಮತ ಚಲಾಯಿಸಿದ್ದರಿಂದ 3-0 ಬಹುಮತದೊಂದಿಗೆ ಬೈಡನ್ ಜಯವನ್ನು ದೃಢೀಕರಿಸಲಾಗಿದೆ. ಮತ್ತೊಬ್ಬ ರಿಪಬ್ಲಿಕನ್ ಸದಸ್ಯ ನಾರ್ಮ್ ಶಿಂಕ್ಲೆ ಮತದಾನದಿಂದ ದೂರ ಉಳಿದಿದ್ದು, ಮಿಚಿಗನ್ ವಿಧಾನಸಭೆ ಫಲಿತಾಂಶದ ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಸಲಹೆ ಮಾಡಿದ್ದಾರೆ.

ಯಾವುದೇ ಅಕ್ರಮವನ್ನು ತನಿಖೆ ನಡೆಸಬೇಕು; ಆದರೆ ಪ್ರಚಾರಕರ ಮಂಡಳಿ ಇದರ ಭಾಗವಾಗಬಾರದು; "ಚುನಾವಣೆಯ ಫಲಿತಾಂಶವನ್ನು ದೃಢೀಕರಿಸುವ ಸ್ಪಷ್ಟ ಕಾನೂನಾತ್ಮಕ ಕರ್ತವ್ಯ ನಮ್ಮದು" ಎಂದು ಲಂಗ್‌ವೆಲ್ಡ್ ಅಭಿಪ್ರಾಯಪಟ್ಟಿದ್ದಾರೆ.

ರಿಪಬ್ಲಿಕನ್ ಪಕ್ಷದ ಪ್ರಚಾರಕರು ಪರಿಶೀಲನೆ ಅಥವಾ ಮರು ಎಣಿಕೆಗೆ ಮನವಿ ಸಲ್ಲಿಸಬಹುದಾಗಿದೆ. ಆದರೆ ಬೈಡನ್ ಅವರ ವಿಜಯದ ಅಂತರವಾದ 1,50,000 ಮತಗಳನ್ನು ಬುಡಮೇಲು ಮಾಡುವುದು ಕಷ್ಟಸಾಧ್ಯ. ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸುವ ವಿಚಾರದಲ್ಲಿ ಟ್ರಂಪ್ ಜತೆ ಸಂಘರ್ಷಕ್ಕೆ ಇಳಿದಿದ್ದ ಡೆಮಾಕ್ರೆಟಿಕ್ ಪಕ್ಷಕ್ಕೆ ಸೇರಿದ್ದ ಮಿಚಿಗನ್ ಗವರ್ನರ್ ಕ್ಯಾಥರಿನ್ ವಿಟ್ಮೆರ್, ಪ್ರಚಾರಕ ಮಂಡಳಿಯ ನಿರ್ಧಾರವನ್ನು ಶ್ಲಾಘಿಸಿದ್ದಾರೆ. "ಮಿಚಿಗನ್ ಜನ ಮಾತನಾಡಿದ್ದಾರೆ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡನ್ ಮಿಚಿಗನ್ ರಾಜ್ಯದಲ್ಲಿ 1.54 ಲಕ್ಷ ಮತಗಳಿಂದ ಗೆದ್ದಿದ್ದಾರೆ. ಅವರು ಜನವರಿ 20ರಂದು ನಮ್ಮ ಅಧ್ಯಕ್ಷರಾಗಲಿದ್ದಾರೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News