ಇಂದಿರಾ ರತ್ನ ಪ್ರಶಸ್ತಿಗೆ ಎಚ್.ಜಿ.ಶೋಭಾ ಆಯ್ಕೆ

Update: 2020-11-24 18:24 GMT

ಬೆಂಗಳೂರು, ನ.24: ಕರ್ನಾಟಕ ಲೇಖಕಿಯರ ಸಂಘ ನೀಡುವ ಪ್ರಸಕ್ತ ಸಾಲಿನ `ಇಂದಿರಾ ರತ್ನ' ಪ್ರಶಸ್ತಿಗೆ ಲೇಖಕಿ ಮತ್ತು ಸಂಘಟಕಿ ಎಚ್.ಜಿ. ಶೋಭಾ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 5 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದ್ದು, ನ.30ರಂದು ಸಂಜೆ 4 ಗಂಟೆಗೆ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ವೆಬಿನಾರ್ ಮೂಲಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News