ಬೆಂಗಳೂರು: 10 ವರ್ಷದ ಬಾಲಕಿಯ ಅತ್ಯಾಚಾರ; ಆರೋಪಿ ಅರ್ಚಕ ಪೊಲೀಸ್ ವಶಕ್ಕೆ

Update: 2020-11-26 11:37 GMT
ಆರೋಪಿ ವೆಂಕಟರಮಣಪ್ಪ

ಬೆಂಗಳೂರು, ನ.26: ದೇವಾಲಯದ ಸಮೀಪ ಆಟವಾಡುತ್ತಿದ್ದ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದೇವಾಲಯದ ಅರ್ಚಕನೊಬ್ಬನನ್ನು ದೇವನಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇವನಹಳ್ಳಿ ಸಮೀಪದ ಚೌಡೇಶ್ವರಿ ದೇವಸ್ಥಾನದ ಅರ್ಚಕ ವೆಂಕಟರಮಣಪ್ಪ(61) ಅತ್ಯಾಚಾರ ಆರೋಪಿಯಾಗಿದ್ದಾನೆ.

 ಎರಡು ದಿನಗಳ ಹಿಂದೆ ಇಲ್ಲಿನ ಚೌಡೇಶ್ವರಿ ದೇವಸ್ಥಾನದ ಬಳಿ ಆಟವಾಡುತ್ತಿದ್ದ 10 ವರ್ಷದ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಬಳಿಕ ಅಲ್ಲಿ ಹೂ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಕೆ ಬಾಲಕಿ ಕುರಿತು ಮಾಹಿತಿ ನೀಡಿದ್ದು, ಅದರಂತೆ ಹುಡುಕಾಡಿದಾಗ ಬಾಲಕಿ ಪತ್ತೆಯಾಗಿದ್ದಳು. ಈ ವೇಳೆ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಅತ್ಯಾಚಾರ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ದುಷ್ಕರ್ಮಿ ವೆಂಕಟರಮಣಪ್ಪಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದು ದೂರಲಾಗಿದೆ. ಈ ಸಂಬಂಧ ದೇವನಹಳ್ಳಿ ಠಾಣಾ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ವೆಂಕಟರಮಣಪ್ಪನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಇನ್ನು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದಾಗ ದೌರ್ಜನ್ಯವೆಸಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ರಸ್ತೆಯಲ್ಲಿದ್ದ ಬಾಲಕಿಯೊಂದಿಗೆ ವೆಂಕಟರಮಣಪ್ಪ ಮಾತನಾಡುತ್ತಿದ್ದ ಮತ್ತು ಅವಳ ಮನೆಯೊಳಗೆ ಕರೆದೊಯ್ಯುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ.

ಖಂಡನೆ: ಎಳೆಯ ಬಾಲಕಿಯ ಮೇಲೆ ಅರ್ಚಕನೋರ್ವ ನಡೆಸಿದ ಅತ್ಯಾಚಾರವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಮುಹಮ್ಮದ್ ಝುಬೈರ್ ತೀವ್ರವಾಗಿ ಖಂಡಿಸಿದ್ದಾರೆ.

ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದಿರುವಂತಹ ಅತ್ಯಾಚಾರ ಕೃತ್ಯಗಳು ಈಗ ರಾಜ್ಯ ರಾಜಧಾನಿಯಲ್ಲೂ ನಡೆಯುತ್ತಿರುವುದು ದುರಾದೃಷ್ಟಕರ. ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News