ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದರೆ ಎರಡೆರಡು ಪ್ರತ್ಯೇಕ ಸಭೆ ಏಕೆ: ಸಿದ್ದರಾಮಯ್ಯ ಪ್ರಶ್ನೆ

Update: 2020-11-26 15:10 GMT

ಬೆಂಗಳೂರು, ನ.26: ಗುಂಪುಗಾರಿಕೆಯಿಂದ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದರೆ ಎರಡೆರಡು ಪ್ರತ್ಯೇಕ ಸಭೆ ಮಾಡುತ್ತಿರುವುದೇಕೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೋಳಿ ನಾಲ್ಕೈದು ಶಾಸಕರನ್ನು ಕಲೆ ಹಾಕಿ ಒಂದು ಸಭೆ ಮಾಡಿದರೆ, ರೇಣುಕಾಚಾರ್ಯ ಮತ್ತೊಂದು ಸಭೆ ಮಾಡುತ್ತಾರೆ. ಇದರ ಬಗ್ಗೆ ತಮಗೆ ಮಾಹಿತಿ ಇದ್ದರೂ ಇವರಲ್ಲಿ ಒಗ್ಗಟ್ಟು ಇದೆ ಎಂಬ ಹೇಳಿಕೆಯನ್ನು ನಾವು ನೀಡಬೇಕೆ ಎಂದು ಲೇವಡಿ ಮಾಡಿದರು.

ರಾಜ್ಯ ಸರಕಾರ ಜಯಪ್ರಕಾಶ್ ಹೆಗ್ಡೆ ಅವರನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಅವರು ಸರಕಾರಕ್ಕೆ ಜಾತಿ ಸಮೀಕ್ಷೆ ವರದಿ ನೀಡುತ್ತಾರಾದರೂ ಸರಕಾರ ಅದನ್ನು ಸ್ವೀಕರಿಸಬೇಕು. ಆದರೆ, ಸರಕಾರ ಜಾತಿ ಗಣತಿ ಸ್ವೀಕರಿಸುವ ಕೆಲಸ ಮಾಡುತ್ತಿಲ್ಲ. ಸರಕಾರ ವರದಿಯನ್ನೊಮ್ಮೆ ನೋಡಲಿ. ಸುಮ್ಮನೆ ತಪ್ಪು ಹುಡುಕುವುದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News