ಕುದುರೆ ರೇಸ್ ಬೆಟ್ಟಿಂಗ್: ನಾಲ್ವರ ಬಂಧನ, 20 ಲಕ್ಷ ರೂ. ನಗದು ಜಪ್ತಿ
Update: 2020-11-27 22:12 IST
ಬೆಂಗಳೂರು, ನ.27: ಕುದುರೆ ರೇಸ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 20 ಲಕ್ಷ 6 ಸಾವಿರ ನಗದು, 7 ಮೊಬೈಲ್‍ಗಳನ್ನು ಜಪ್ತಿ ಮಾಡಿದ್ದಾರೆ.
ವಿಜಯನಗರದ ಸತ್ಯನಾರಾಯಣರಾಜು(49), ಕುಮಾರ(38), ಶ್ರೀಕಾಂತ್(33), ಶೇಷಾದ್ರಿಪುರಂನ ಸಂದೀಪ್(27) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನ.25 ರಂದು ಮಧ್ಯಾಹ್ನ ಆರ್‍ಪಿಸಿ ಲೇಔಟ್‍ನ ಮನೆಯೊಂದರ 4ನೇ ಮಹಡಿಯಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಬೆಟ್ಟಿಂಗ್‍ನ ಖಚಿತ ಮಾಹಿತಿಯಾಧರಿಸಿ ಡಿಸಿಪಿ ರವಿಕುಮಾರ್ ನೇತೃತ್ವದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.