ಏಕದಿನ ಪಂದ್ಯ: ಚಹಾಲ್ ‘ದುಬಾರಿ’ ದಾಖಲೆ

Update: 2020-11-27 19:00 GMT

ಸಿಡ್ನಿ, ನ.27: ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಯಜುವೇಂದ್ರ ಚಹಾಲ್ 10 ಓವರ್‌ಗಳಲ್ಲಿ 89 ರನ್ ನೀಡುವ ಮೂಲಕ ದುಬಾರಿ ಎನಿಸಿಕೊಂಡಿದ್ದಾರೆ.

 ಚಹಾಲ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಿಟ್ಟು ಕೊಟ್ಟ ಭಾರತದ ಮೊದಲ ಸ್ಪಿನ್ನರ್ ಆಗಿ ಅನಪೇಕ್ಷಿತ ದಾಖಲೆ ಬರೆದಿದ್ದಾರೆ.

ಚಹಾಲ್ ಒಂದು ರೀತಿಯಲ್ಲಿ ತನ್ನ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಚಹಾಲ್ 10 ಓವರ್‌ಗಳಲ್ಲಿ 88 ರನ್ ನೀಡಿದ್ದರು.

 ಏಕದಿನ ಕ್ರಿಕೆಟ್‌ನಲ್ಲಿ ದುಬಾರಿ ಬೌಲರ್ ದಾಖಲೆ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹೆಸರಲ್ಲಿದೆ. ಅವರು 2015ರಲ್ಲಿ ದಕ್ಷಿಣ ಆಫ್ರಿಕದಲ್ಲಿ 106 ರನ್ ಬಿಟ್ಟುಕೊಟ್ಟಿದ್ದರು. ಚಹಾಲ್ ಮಾರ್ಕುಸ್ ಸ್ಟೋನಿಸ್‌ಗೆ ಮೊದಲ ಎಸೆತದಲ್ಲಿ ಪೆವಿಲಿಯನ್ ಹಾದಿ ತೋರಿಸಿದ್ದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೇಲೆ ಸ್ಪಿನ್ ದಾಳಿ ಪರಿಣಾಮ ಬೀಳಲಿಲ್ಲ. ಅವರು 19 ಎಸೆತಗಳಲ್ಲಿ 45 ರನ್ ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News