ಪ್ರತಿಭಟನಾನಿರತ ರೈತರಿಗೆ ಆಹಾರ ಪೂರೈಸಿ, ರಾತ್ರಿ ಉಳಿದುಕೊಳ್ಳಲು ಬಾಗಿಲು ತೆರೆದ 25 ಮಸೀದಿಗಳು

Update: 2020-11-28 08:22 GMT

ಹೊಸದಿಲ್ಲಿ: ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿ ಚಲೋ ಅಂಗವಾಗಿ ಆಗಮಿಸಿರುವ ಸಾವಿರಾರು ರೈತರಿಗೆ ರಾಜಧಾನಿಯ ವಿವಿಧ ಮಸೀದಿಗಳ ಮುಖಾಂತರ ಆಹಾರ ಸರಬರಾಜು ಸತತ ಎರಡನೇ ದಿನವೂ ಮುಂದುವರಿದಿದೆ. ಕನಿಷ್ಠ 25 ಮಸೀದಿಗಳು ರಾತ್ರಿ ರೈತರಿಗೆ ಆಶ್ರಯ ಕಲ್ಪಿಸಲು ಸಿದ್ಧತೆ ನಡೆಸಿವೆ ಎಂದು ಈ ಏರ್ಪಾಟುಗಳನ್ನು ನೋಡಿಕೊಳ್ಳುತ್ತಿರುರವ ಯುನೈಟೆಡ್ ಅಗೇನ್ಸ್ಟ್ ಹೇಟ್ ಸಂಘಟನೆಯ ನದೀಮ್ ಖಾನ್ ಹೇಳಿದ್ದಾರೆ.

ದಿಲ್ಲಿಯ ಹೌಝ್ ಖಸ್, ಒಖ್ಲಾ, ಓಲ್ಡ್ ರೋಹ್ಟಕ್ ರೋಡ್ ಹಾಗೂ ಹಳೆ ದಿಲ್ಲಿಯಲ್ಲಿ ದಿನದ 24 ಗಂಟೆಯೂ ಅಡುಗೆ ತಯಾರಿ ನಡೆಯುತ್ತಿದ್ದು ಇಲ್ಲಿಗೆ ಆಗಮಿಸುವ ರೈತರಿಗೆ ಆಹಾರ ನೀಡುವುದರ ಜತೆಗೆ ಆಹಾರ ಪ್ಯಾಕೆಟುಗಳನ್ನು ರೈತರು ಇರುವಲ್ಲಿಗೇ ಸರಬರಾಜು ಮಾಡಲಾಗುತ್ತಿದೆ. ರೈತರು ದೊಡ್ಡ ಸಂಖ್ಯೆಯಲ್ಲಿರುವ ಕಡೆ ಸಂಘಟನೆಯ ವ್ಯಾನ್ ತೆರಳಿ ಆಹಾರ ಪ್ಯಾಕೆಟ್ ಪೂರೈಸುತ್ತಿದೆ. ಪ್ರತಿಭಟನೆಗಾಗಿ ಆಗಮಿಸಿದ ಯಾವನೇ ರೈತ ಹಸಿವಿನಿಂದ ಬಳಲದೇ ಇರುವಂತೆ ನೋಡಿಕೊಳ್ಳುವುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ತಮ್ಮ ಸಂಘಟನೆ ರೈತರಿಗೆ ರಾತ್ರಿ 25 ಮಸೀದಿಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ ಹಾಗೂ ಅವರಿಗೆ ಬ್ಲ್ಯಾಂಕೆಟ್‍ಗಳ ವ್ಯವಸ್ಥೆಯನ್ನೂ ಮಾಡಿದೆ. ರೈತರನ್ನು ಅವರಿರುವ ಸ್ಥಳದ ಹತ್ತಿರದ ಮಸೀದಿಗೆ ರಾತ್ರಿ ಉಳಿದುಕೊಳ್ಳಲು ಕರೆದೊಯ್ಯಲು ನಮ್ಮ ಸ್ವಯಂಸೇವಕರ ವಾಹನಗಳೂ ಸನ್ನದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News