ಮರುಭೂಮಿಯಲ್ಲಿ ಹೊಳೆಯುವ ವಿಚಿತ್ರ ಲೋಹದ ಸ್ತಂಭ ಪತ್ತೆ!

Update: 2020-11-28 10:47 GMT

ಸಾಲ್ಟ್ ಲೇಕ್ ಸಿಟಿ: ಪಶ್ಚಿಮ ಅಮೆರಿಕಾದ ಯುಟಾ ರಾಜ್ಯದ ಆಗ್ನೇಯ ದಿಕ್ಕಿನಲ್ಲಿ ಕಳೆದ ವಾರ ದೊಡ್ಡ ಕೊಂಬಿನ ಕುರಿಗಳ ವೈಮಾನಿಕ ಸಮೀಕ್ಷೆಯ ವೇಳೆ ಪತ್ತೆಯಾದ ಹೊಳೆಯುವ ಬೃಹತ್ ಸ್ತಂಭವೊಂದು ಭಾರೀ ಕುತೂಹಲ ಕೆರಳಿಸಿದೆ.

ವನ್ಯಜೀವಿ ಸಂಪನ್ಮೂಲಗಳು ಹಾಗೂ ಸಾರ್ವಜನಿಕ ಸುರಕ್ಷತಾ ಇಲಾಖೆಯ ಸಿಬ್ಬಂದಿ ಈ ಸ್ತಂಭವನ್ನು ಮೊದಲು ನವೆಂಬರ್ 18ರಂದು ನೋಡಿದ್ದು ಅದೇ ದಿನ ವಿರಾಮದ ವೇಳೆ ಆ ಸ್ಥಳಕ್ಕೆ ತೆರಳಿ ಅದನ್ನು ಪರಿಶೀಲಿಸಿದ್ದಾರೆ.

ತ್ರಿಕೋನವಿರುವ ಈ ಉಕ್ಕಿನ ಸ್ತಂಭವು ಎರಡು ಆಳೆತ್ತರದ ವ್ಯಕ್ತಿಗಳಷ್ಟು ಎತ್ತರವಿದೆ. ಬಂಡೆಗಳಿಂದ ಆವೃತವಾದ ಸ್ಥಳದಲ್ಲಿ ಬಂಡೆಯೊಂದಕ್ಕೆ ಸಿಕ್ಕಿಸಲಾಗಿರುವ ರೀತಿಯಲ್ಲಿರುವ ಈ ಸ್ಥಂಭ 10ರಿಂದ 12  ಅಡಿ ಎತ್ತರವಿದೆ.

ಜನಸಂಚಾರವಿಲ್ಲದ ಸ್ಥಳದಲ್ಲಿ ಈ ಸ್ತಂಭ ಪತ್ತೆಯಾಗಿರುವುದರಿಂದ ಅದೆಲ್ಲಿದೆ ಎಂದು ಅಧಿಕಾರಿಗಳು ಇನ್ನೂ ಬಹಿರಂಗ ಪಡಿಸಿಲ್ಲ. ಅದನ್ನು ನೋಡಲೆಂದು ಜನರು ತೆರಳಿ ಕೊನೆಗೆ ದಾರಿ ತಪ್ಪುವುದು ಬೇಡ ಎಂಬ ಉದ್ದೇಶ ಇದರ ಹಿಂದಿದೆ.

ಈ ಸ್ತಂಭದ ಕುರಿತಂತೆ ಹೆಚ್ಚಿನ ಅಧ್ಯಯನವನ್ನು  ಅಲ್ಲಿನ ಅಧಿಕಾರಿಗಳು ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News