ಮಲೇಶ್ಯ: ಕೊರೋನ ಹೋದ ಬಳಿಕ ಚುನಾವಣೆ ; ಪ್ರಧಾನಿ ಮುಹಿಯುದ್ದೀನ್ ಯಾಸಿನ್ ಘೋಷಣೆ

Update: 2020-11-28 18:06 GMT

ಕೌಲಾಲಂಪುರ (ಮಲೇಶ್ಯ), ನ. 28: ನೋವೆಲ್ ಕೊರೋನ ವೈರಸ್ ಸಾಂಕ್ರಾಮಿಕ ಹೋದ ಬಳಿಕ ಮಲೇಶ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾಗುವುದು ಎಂದು ಪ್ರಧಾನಿ ಮುಹಿಯುದ್ದೀನ್ ಯಾಸಿನ್ ಶನಿವಾರ ಹೇಳಿದರು.

ತನ್ನ ಸರಕಾರದ ಬಜೆಟ್ ಗೆ ಸಂಸತ್ತಿನ ಬೆಂಬಲವನ್ನು ಗೆದ್ದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

2021ರ ಬಜೆಟ್‌ಗೆ ಸಂಸತ್ತು ಗುರುವಾರ ಅಂಗೀಕಾರ ನೀಡಿದೆ. ಬಜೆಟ್‌ಗೆ ಅನುಮೋದನೆ ನೀಡುವುದಿಲ್ಲ ಎಂಬುದಾಗಿ ಪ್ರತಿಪಕ್ಷಗಳು ಮತ್ತು ಸ್ವತಃ ಮುಹಿಯುದ್ದೀನ್‌ರ ಮಿತ್ರ ಪಕ್ಷಗಳು ಬೆದರಿಕೆ ಹಾಕಿದ ಹೊರತಾಗಿಯೂ ಬಜೆಟ್‌ಗೆ ಅಂಗೀಕಾರ ಲಭಿಸಿದೆ.

‘‘ದೇವರ ಇಚ್ಛೆಯಿದ್ದರೆ, ಕೋವಿಡ್-19 ಸಾಂಕ್ರಾಮಿಕ ಹೋದ ಬಳಿಕ ನಾವು ಸಂಸತ್‌ಗೆ ಚುನಾವಣೆ ನಡೆಸುತ್ತೇವೆ’’ ಎಂದು ತನ್ನ ಬೆರ್ಸಾತು ಪಕ್ಷದ ವಾರ್ಷಿಕ ಮಹಾಸಭೆಯನ್ನು ಆನ್‌ಲೈನ್‌ನಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News