ಸಚಿವ ಈಶ್ವರಪ್ಪರಿಂದ ರಾಜ್ಯದಲ್ಲಿ ಅಧರ್ಮ ಸೃಷ್ಟಿ : ಎಸ್.ಆರ್. ಪಾಟೀಲ್

Update: 2020-11-29 11:09 GMT
ಎಸ್.ಆರ್.ಪಾಟೀಲ್

ಬೆಂಗಳೂರು, ನ. 29 : ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಚುನಾವಣೆಯ ನೆಪದಲ್ಲಿ ರಾಜ್ಯದಲ್ಲಿ ಅಧರ್ಮ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಂದು ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‍ನ್ನು ಕುರುಬರಿಗೋ, ಲಿಂಗಾಯಿತರಿಗೋ, ಒಕ್ಕಲಿಗರಿಗೋ, ಬ್ರಾಹ್ಮಣರಿಗೋ ಕೊಡುತ್ತೇವೆ. ಆದರೆ, ಮುಸ್ಲಿಮರಿಗೆ ಮಾತ್ರ ಕೊಡಲ್ಲವೆಂದು ಹೇಳಿದ್ದಾರೆ. ಬಿಜೆಪಿ ಸಚಿವರೊಬ್ಬರ ಬಾಯಲ್ಲಿ ಇದೆಂಥಾ ಅಧರ್ಮದ ಮಾತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಜಾತಿ ರಾಜಕಾರಣದ ಬೆನ್ನಲ್ಲೇ ಬಿಜೆಪಿ ಸಚಿವ ಕೆ.ಎಸ್.ಈಶ್ವರಪ್ಪ ಧರ್ಮ ರಾಜಕಾರಣವನ್ನು ಎಳೆದು ತಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಾಲಿಗೆಯನ್ನು ಹರಿಬಿಟ್ಟಿರುವುದು ಎಷ್ಟು ಸರಿ. ಇದೇನಾ ಬಿಜೆಪಿಯ ಶಿಸ್ತು ಎಂದು ಅವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News