ಮಾರ್ಷಲ್‍ಗಳ ಮೇಲೆ ಸಾರ್ವಜನಿಕರ ದರ್ಪ : ದೂರು ಸ್ವೀಕರಿಸಿದ ಪೊಲೀಸರು

Update: 2020-11-29 11:26 GMT

ಬೆಂಗಳೂರು, ನ. 29: ನಗರದಲ್ಲಿ ಮಾಸ್ಕ್ ಹಾಕದೇ ಓಡಾಡುವ ಸಾರ್ವಜನಿಕರಿಗೆ ಬಿಬಿಎಂಪಿ ಮಾರ್ಷಲ್‍ಗಳು ದಂಡ ವಿಧಿಸುತ್ತಿದ್ದಾರೆ. ಆದರೆ ಈ ರೀತಿ ದಂಡ ವಿಧಿಸುವ ಮಾರ್ಷಲ್‍ಗಳ ಮೇಲೆ ಸಾರ್ವಜನಿಕರೂ ನಿಂದಿಸಿ, ಹಲ್ಲೆ ಮಾಡಿದರೂ ಯಾವುದೇ ದೂರು ದಾಖಲಾಗಿಲ್ಲ. ಕಾರಣ ಮಾರ್ಷಲ್‍ಗಳ ದೂರನ್ನು ಪೊಲೀಸರು ಸ್ವೀಕರಿಸದೇ ಇರುವುದು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಹಿನ್ನೆಲೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್‍ಗಳನ್ನು ನೇಮಕ ಮಾಡಿದೆ. ಆದರೆ, ಮಾರ್ಷಲ್‍ಗಳು ಮಾಸ್ಕ್ ಹಾಕಿ ಎಂದು ಸಾರ್ವಜನಿಕರಿಗೆ ಹೇಳಿದರೆ ಮಾರ್ಷಲ್‍ಗಳಿಗೆ ನಿಂದಿಸಿ, ಹಲ್ಲೆ ಮಾಡು ತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ. ಜಯನಗರದಲ್ಲಿ ಶನಿವಾರ ಸಂಜೆ ಮಾರ್ಷಲ್ ಒಬ್ಬರು ಮಹಿಳೆ ಯನ್ನು ಯಾಕೆ ಮಾಸ್ಕ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ಮಹಿಳೆ ಮಾರ್ಷಲ್‍ಗೆ ಮಾಸ್ಕ್ ಹಾಕಿದವರಿಗೇನು ಕೊರೋನ ಬರುವುದಿಲ್ವಾ ಎಂದು ಆವಾಝ್ ಹಾಕಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ಅವರು ಕೂಡ ದೂರು ಸ್ವೀಕಾರ ಮಾಡುತ್ತಿಲ್ಲ ಎಂಬುದು ಮಾರ್ಷಲ್‍ಗಳ ಆರೋಪವಾಗಿದೆ. ಪ್ರಸ್ತುತ ಇರುವ ಮಾರ್ಷಲ್‍ಗಳ ಪೈಕಿ ಬಹುತೇಕರು ಎಕ್ಸ್ ಆರ್ಮಿ ಹಾಗೂ ಎನ್‍ಸಿಸಿ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News