ಮಾಜಿ ಕುಲಪತಿಗೆ ಈಡಿ ಸಮನ್ಸ್

Update: 2020-11-29 11:30 GMT

ಬೆಂಗಳೂರು, ನ. 29: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪ ಸಂಬಂಧ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಅಂಗೂರ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿ, ಡಿ.2ರ 11 ಗಂಟೆಗೆ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಈ ಹಿಂದೆ ಅ.9ರಂದು ಮಧುಕರ್ ಅಂಗೂರ್ ಅವರ ವಿಚಾರಣೆಗೊಳಪಡಿಸಿದಾಗ ಹಣ ವರ್ಗಾವಣೆ ಮತ್ತು ಹಣದ ವ್ಯವಹಾರದ ಬಗ್ಗೆ ಕೆಲ ಮಾಹಿತಿ ಬಿಚ್ಚಿಟ್ಟಿದ್ದರು. ಅಮೆರಿಕ ದೇಶದ ಪೌರತ್ವ ಹೊಂದಿರುವ ಮಧುಕರ್ ಅಂಗೂರ್ ಮೇಲೆ ಸಾರ್ವಜನಿಕರ 100 ಕೋಟಿ ರೂ. ದುರುಪಯೋಗ ಮಾಡಿರುವ ಆರೋಪವಿದೆ.

ಸದ್ಯ ಮಧುಕರ್ ಅಂಗೂರ್ ಮತ್ತು ಸಹವರ್ತಿಗಳ ಬ್ಯಾಂಕ್ ಖಾತೆ, ಚಿರಾಸ್ತಿ ವಿವರ, 10 ವರ್ಷಗಳ ಐಟಿ ರಿಟರ್ನ್ ಸಲ್ಲಿ ಸಿದ ಮಾಹಿತಿಯನ್ನು ಈಡಿ ಕಲೆ ಹಾಕಿದೆ. 2010ನೆ ಸಾಲಿನಿಂದ 2017ರವರೆಗೂ ಮಧುಕರ್ ಅಂಗೂರ್ ಅವರು ವಿಶ್ವವಿದ್ಯಾಲಯ ಮತ್ತು ಅದರ ಪ್ರಾಯೋಜಕತ್ವ ಹೊಂದಿದ್ದರು. ಈ ವೇಳೆ ಕಂಪೆನಿಯಿಂದ ಬೃಹತ್ ಮೊತ್ತದ ಹಣ ದುರುಪಯೋಗ ಪಡಿಸಿಕೊಂಡ ಕಾರಣ ದೂರು ದಾಖಲಾಗಿತ್ತು.

ಮತ್ತೊಂದೆಡೆ ಮಾಜಿ ಸಚಿವನೋರ್ವನಿಗೆ ಅಲಯನ್ಸ್ ಕಂಪೆನಿಯಿಂದ ಹಣ ಹೋದ ವಿಚಾರವೂ ಕೂಡ, ವಿಚಾರಣೆ ವೇಳೆ ಬಾಯ್ಬಿಬಿಟ್ಟಿದ್ದರು. ಹೀಗಾಗಿಯೇ, ಈಡಿ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News