ಪಾಕಿಸ್ತಾನದ ಕ್ರಿಕೆಟ್ ನಾಯಕ ಬಾಬರ್ ಆಝಮ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2020-11-30 06:29 GMT

ಲಾಹೋರ್: ಪಾಕಿಸ್ತಾನ ಕ್ರಿಕೆಟ್‌ನ್ನು ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಯುವತಿಯೊಬ್ಬಳು ಸುದ್ದಿಗೋಷ್ಟಿಯನ್ನು ನಡೆಸಿ ಪಾಕ್ ಕ್ರಿಕೆಟ್ ನಾಯಕ ಬಾಬರ್ ಆಝಮ್ ತನಗೆ 10 ವರ್ಷಗಳಿಂದ ಶೋಷಣೆ ನೀಡುತ್ತಿದ್ದು, ವಿವಾಹವಾಗುವ ಸುಳ್ಳು ಭರವಸೆಯನ್ನು ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

   ಬಾಬರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರು 2010ರಲ್ಲಿ ತನ್ನನ್ನು ಮದುವೆಯಾಗುವುದಾಗಿ ಹೇಳಿದ್ದರು. 2011ರಲ್ಲಿ ಕೋರ್ಟ್‌ನಲ್ಲಿ ವಿವಾಹವಾಗುವ ಭರವಸೆ ನೀಡಿದ್ದರು. ಆದರೆ ಅವರು ಕ್ರಿಕೆಟ್‌ನಲ್ಲಿ ಹೆಸರು ಗಳಿಸಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಬಳಿಕ ಇವೆಲ್ಲವನ್ನೂ ಮರೆತ್ತಿದ್ದಾರೆ. ಅವರು ಕ್ರಿಕೆಟ್‌ನಲ್ಲಿ ಹೆಸರು ಮಾಡುವ ಮೊದಲೇ ಅವರೊಂದಿಗೆ ತನಗೆ ಸಂಬಂಧವಿತ್ತು. ನಾವಿಬ್ಬರೂ ಶಾಲಾ ಸ್ನೇಹಿತರಾಗಿದ್ದೆವು. ತಾನು ಪೊಲೀಸರ ಮೊರೆ ಹೋಗುವ ಮೊದಲು ಬಾಬರ್ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News