ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷ, ನಿರ್ದೇಶಕರ ನೇಮಕ

Update: 2020-11-30 17:04 GMT

ಬೆಂಗಳೂರು, ನ.30: ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಅಧ್ಯಕ್ಷರಾಗಿ ಪರಮಶಿವಯ್ಯ, ನಿರ್ದೇಶಕರಾಗಿ ವೀರಣ್ಣ ಚರಂತಿಮಠ, ಪ್ರಭಾಕರ ಕೋರೆ, ಹಾಲಪ್ಪ ಆಚಾರ್, ಸೊಗಡು ಶಿವಣ್ಣ, ಶಂಕರ್ ಮುನೇನಕೊಪ್ಪ ಪಾಟೀಲ್, ಯು.ಬಿ.ಬಣಕಾರ್, ಅರವಿಂದ ಬೆಲ್ಲದ, ಲಿಂಗಮೂರ್ತಿ ಹೊಸದುರ್ಗ, ಮಹಾಂತೇಶ್ ಎಂ.ಪಾಟೀಲ್, ವಿಜಯಲಕ್ಷ್ಮಿ ಈಶ್ವರಪ್ಪ ಬಾಳೆಕುಂದ್ರಿ ಅವರನ್ನು ನೇಮಕ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News