ಲವ್ ಜಿಹಾದ್- ನಿಜವೆಷ್ಟು? ಸುಳ್ಳೆಷ್ಟು?

Update: 2020-12-02 10:12 GMT

ಹಿಟ್ಲರ್ ಕೂಡ 1935ರಲ್ಲಿ ಆರ್ಯನ್ ಪರಿಶುದ್ಧತೆಯನ್ನು ಉಳಿಸಿಕೊಂಡು ಜರ್ಮನಿಯ ಧಮನಿಯಲ್ಲಿರುವ ಬಹು ಸಂಸ್ಕೃತಿಯನ್ನು ತೊಡೆದುಹಾಕುವ ಭಾಗವಾಗಿ ಜರ್ಮನ್-ಯೆಹೂದಿ ಮದುವೆಗಳನ್ನು ನಿಷೇಧಿಸಿದ್ದ. ಮೋದಿ ಸರಕಾರದ ಲವ್ ಜಿಹಾದ್ ನಿಷೇಧದ ಕಾನೂನುಗಳು ಕೂಡಾ ಹಿಂದೂ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಅಜೆಂಡಾದ ಭಾಗವಾಗಿವೆ. ಇದು ಕೇವಲ ಅಂತರ್ ಧರ್ಮೀಯ ವಿವಾಹ ನಿಷೇಧದಲ್ಲಿ ಮಾತ್ರ ಕೊನೆಗೊಳ್ಳದೆ ಅಂತರ್ ಜಾತೀಯ ಮದುವೆಯನ್ನೂ ನಿಷೇಧಿಸಿ ಮೇಲ್ಜಾತಿ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನೂ ಒಳಗೊಂಡಿದೆ.


ಸ್ವರಾಜ್ ಮತ್ತು ಸುರಾಜ್ ಎಂದರೆ ಮುಸ್ಲಿಮರ, ದಲಿತರ, ರೈತಾಪಿಗಳ, ವಲಸೆ ಕಾರ್ಮಿಕರ, ಬಡಪಾಯಿಗಳ ಮತ್ತು ಎಲ್ಲಾ ಧರ್ಮದ ಹೆಣ್ಣು ಮಕ್ಕಳ ಬದುಕನ್ನು ಸಾಧ್ಯವಾದಷ್ಟು ಧ್ವಂಸಗೊಳಿಸುವುದು ಎಂದು ಮೋದಿ ನೇತೃತ್ವದ ಬಿಜೆಪಿ ದಿನೇ ದಿನೇ ಸ್ಪಷ್ಟಪಡಿಸುತ್ತಿದೆ.

ಕಳೆದ ಸೆಪ್ಟ್ಟಂಬರ್‌ನಲ್ಲಿ ಉತ್ತರಪ್ರದೇಶದಲ್ಲಿ ಒಬ್ಬ ಮುಸ್ಲಿಂ ಮಹಿಳೆ ಸ್ವ ಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದಳು. ಆದರೆ ಮದುವೆಯಾಗಬೇಕೆಂಬ ಉದ್ದೇಶದಿಂದ ಮತಾಂತರಗೊಂಡಿದ್ದರಿಂದ ಈ ಮತಾಂತರ ಹಾಗೂ ಮದುವೆ ಎರಡೂ ಕಾನೂನು ಸಮ್ಮತವಲ್ಲ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿನ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿತು.

ಅದೇ ಹೈಕೋರ್ಟು ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಬಗ್ಗೆ ಹತ್ತು ಹಲವು ಸೂಚನೆಗಳನ್ನು ಕೊಟ್ಟಿದ್ದರೂ ಕ್ಯಾರೇ ಎನ್ನದಿದ್ದ ಯೋಗಿ ಸರಕಾರ ಕೂಡಲೇ, ನ್ಯಾಯಾಲಯದ ಈ ಅಭಿಪ್ರಾಯವನ್ನೇ ಸರಕಾರಕ್ಕೆ ಕೊಟ್ಟ ಆದೇಶ ವೆಂದು ಸುಳ್ಳು ವ್ಯಾಖ್ಯಾನ ಮಾಡುತ್ತಾ ಮದುವೆಗಾಗಿ ನಡೆಯುವ ಮತಾಂತರ ಹಾಗೂ ಮದುವೆ ಎರಡನ್ನೂ ನಿಷೇಧಿಸುವ ಕಾನೂನು ತರಲು ಮುಂದಾಯಿತು. ಅದನ್ನೇ ಕಾಯುತ್ತಿದ್ದ ಇತರ ರಾಜ್ಯಗಳ ಬಿಜೆಪಿ ಸರಕಾರಗಳು ಇದೇ ಆದೇಶವನ್ನು ಉಲ್ಲೇಖಿಸುತ್ತಾ ತಮ್ಮ ತಮ್ಮ ರಾಜ್ಯಗಳಲ್ಲೂ ಲವ್ ಜಿಹಾದ್ ಕಾನೂನನ್ನು ತರಲು ಈಗ ಮುಂದಾಗಿವೆ.

ಆದರೆ ನವೆಂಬರ್ 11ರಂದು ಅದೇ ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವು ಈ ಬಗ್ಗೆ ಏಕಸದಸ್ಯ ಪೀಠದ ತೀರ್ಮಾನವು ನ್ಯಾಯ ಹಾಗೂ ಕಾನೂನುಬಾಹಿರ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಏಕಸದಸ್ಯ ಪೀಠದ ತೀರ್ಮಾನ ವನ್ನು ರದ್ದುಗೊಳಿಸಿದೆ ಹಾಗೂ ‘‘ಸ್ವಇಚ್ಛೆಯಿಂದ ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗುವ ಹಾಗೂ ತನ್ನ ಇಷ್ಟದವರನ್ನು ಮದುವೆಯಾಗುವ ಹಕ್ಕು ಈ ದೇಶದ ಸಂವಿಧಾನ ಈ ದೇಶದ ಪ್ರಾಪ್ತ ವಯಸ್ಕರಿಗೆ ಕೊಡುತ್ತದೆ. ಆ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವ ಯಾವ ಅಧಿಕಾರವೂ ಸರಕಾರಕ್ಕಾಗಲೀ, ಸಮಾಜಕ್ಕಾಗಲಿ ಇಲ್ಲ’’ ಎಂದು ಸ್ಪಷ್ಟ ಮಾತುಗಳಲ್ಲಿ ಆದೇಶನೀಡಿದೆ. ಅಲಹಾಬಾದಿನ ದ್ವಿಸದಸ್ಯ ಪೀಠದ ಆದೇಶದ ಪೂರ್ಣಪಠ್ಯವನ್ನು ಆಸಕ್ತರು ಈ ಕೆಳಗಿನ ವೆಬ್ ವಿಳಾಸದಲ್ಲಿ ಓದಬಹುದು:
https://www.livelaw.in/pdf_upload/pdf_upload-384996.pdf

ಆದರೂ ಈಗಾಗಲೇ ಉತ್ತರಪ್ರದೇಶದ ಯೋಗಿ ಸರಕಾರ ಲವ್ ಜಿಹಾದ್ ನಿಷೇಧಿಸುವ ಹೆಸರಿನಲ್ಲಿ ಧಾರ್ಮಿಕ ಗೂಂಡಾಗಿರಿ ನಡೆಸುವ ಸುಗ್ರೀವಾಜ್ಞೆಯನ್ನು ನವೆಂಬರ್ 24ರಿಂದ ಜಾರಿ ಮಾಡಿದೆ. ಮೊನ್ನೆ ಆ ಸುಗ್ರೀವಾಜ್ಞೆಯ ಅಡಿಯಲ್ಲಿ ಪ್ರೀತಿಸಿ ಮದುವೆಯಾದ ವಯಸ್ಕ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯಿಬ್ಬರ ಮೇಲೂ ಎಫ್.ಐ.ಆರ್ ದಾಖಲಿಸಿದೆ!. ಏಕೆಂದರೆ ಯೋಗಿಯ ಈ ಹೊಸ ಕಾಯ್ದೆಯ ಪ್ರಕಾರ ಮುಸ್ಲಿಂ ಯುವಕನೆಷ್ಟು ಅಪರಾಧಿಯೋ, ಅವನನ್ನು ಮದುವೆಯಾಗುವ ಹಿಂದೂ ಮಹಿಳೆಯೂ ಅಷ್ಟೇ ದೊಡ್ಡ ಅಪರಾಧಿ! ಇದೇ ರೀತಿಯ ಕಾಯ್ದೆಯನ್ನು ಧರ್ಮಸ್ವಾತಂತ್ರ್ಯ ಕಾಯ್ದೆಯ ಹೆಸರಿನಲ್ಲಿ ಮಧ್ಯಪ್ರದೇಶದ ಬಿಜೆಪಿ ಸರಕಾರ ಸಿದ್ಧಗೊಳಿಸಿದೆ. ಅದರ ತದ್ರೂಪು ಮಸೂದೆಯನ್ನೇ ಹರ್ಯಾಣದ, ಅಸ್ಸಾಮಿನ ಹಾಗೂ ನಮ್ಮ ಕರ್ನಾಟಕದ ಬಿಜೆಪಿ ಸರಕಾರಗಳು ಜಾರಿಗೊಳಿಸುವುದಾಗಿ ಘೋಷಿಸಿವೆ.

ಅಸಲು ಈ ಲವ್ ಜಿಹಾದ್ ಎಂದರೇನು? 
ಈ ದೇಶದ ಮುಸ್ಲಿಮರನ್ನು ಸದಾ ಖಳರನ್ನಾಗಿಸಲು ಹಾಗೂ ತಮ್ಮ ಧರ್ಮ ಹಾಗೂ ಜಾತಿಗಳ ಮಹಿಳೆಯರನ್ನು ತಮ್ಮ ಅಂಕೆಯಲ್ಲಿರಿಸಿಕೊಳ್ಳಲು ಇಲ್ಲಸಲ್ಲದ ಕಥನಗಳನ್ನು ಹುಟ್ಟಿಹಾಕುವ ಸಂಘಪರಿವಾರದ ಹೊಸಸೃಷ್ಟಿಯೇ ಈ ಲವ್ ಜಿಹಾದ್ ಎಂಬ ಕಥನ. ಮುಸ್ಲಿಂ ಯುವಕರು ಅಮಾಯಕ ಹಿಂದೂ ಮಹಿಳೆಯರನ್ನು ಬೈಕ್ ಸವಾರಿ, ಸುವಾಸನೆಯ ಅತ್ತರು ಇತ್ಯಾದಿ ಆಮಿಷಗಳಿಂದ ‘ಪಟಾಯಿಸಿ’ ಮತಾಂತರ ಮಾಡಿ ಮದುವೆಯಾಗುತ್ತಿದ್ದಾರೆ. ಇದಕ್ಕಾಗಿ ಗಲ್ಫ್ ರಾಷ್ಟ್ರಗಳ ಜಿಹಾದಿ ಸಂಘಟನೆಗಳಿಂದ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ. ಇದರ ಹಿಂದೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಅಂತರ್‌ರಾಷ್ಟ್ರೀಯ ಸಂಚಿದೆ. ಆದ್ದರಿಂದ ಇದು ಲವ್ ಅಲ್ಲ. ಭಾರತದ ಮೇಲೆ ನಡೆಸುತ್ತಿರುವ ಲವ್ ಜಿಹಾದ್ ಆಗಿದೆ ಎಂಬುದು ಈ ಕಥನದ ಸಾರ.

ಹೀಗಾಗಿ ಇದರ ಹಿಂದೆ ಕೇವಲ ಮುಸ್ಲಿಂ ಯುವಕರನ್ನೂ ಮತ್ತು ಇಸ್ಲಾಮನ್ನೂ ದುರುಳೀಕರಿಸುವ ಹುನ್ನಾರಗಳು ಮಾತ್ರವಲ್ಲದೆ ಹಿಂದೂ ಯುವತಿಯರು ಸ್ವಂತ ತಿಳುವಳಿಕೆ ಇಲ್ಲದ, ಚಂಚಲಚಿತ್ತರು ಎಂದು ಚಿತ್ರಿಸುವ ಮನುವಾದಿ ರಾಜಕೀಯವೂ ಎದ್ದುಕಾಣುತ್ತದೆ. ಕರ್ನಾಟಕದಲ್ಲಿ ಶ್ರೀರಾಮ ಸೇನೆ ಹಾಗೂ ಬಜರಂಗದಳಗಳು 2007-09ರಲ್ಲಿ ಹುಟ್ಟುಹಾಕಿದ ಈ ಕಥನ ಜಗತ್ತಿನಾದ್ಯಂತ ವ್ಯಾಪಿಸಿ ನಂತರ ಸರಕಾರ ಹಾಗೂ ನ್ಯಾಯಾಲಯಗಳ ಅಧಿಕೃತ ದಾಖಲೆಗಳಲ್ಲೂ ಸ್ಥಾನಗೌರವ ಪಡೆದುಕೊಂಡು ಮಾನ್ಯತೆ ಪಡೆದುಕೊಂಡುಬಿಟ್ಟಿತು.

ಒಂದೆಡೆ ಶ್ರೀರಾಮ ಸೇನೆ ಕರ್ನಾಟಕದಲ್ಲಿ ಪ್ರತಿವರ್ಷ ಸಾವಿರಾರು ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎಂದು ಪ್ರಚಾರ ಮಾಡಿದರೆ, ಕೇರಳದಲ್ಲಿ ಹಿಂದೂಜನಜಾಗೃತಿ (ನಮ್ಮ ಗೌರಿಯನ್ನು ಕೊಂದವರು ಬಹುಪಾಲು ಪಾತಕಿಗಳು ಈ ಸಂಘಟನೆಯ ಸಂಬಂಧಿಕರು) ಸಂಘಟನೆಯು ಕೇರಳದಲ್ಲಿ 30,000 ಹಿಂದೂ ಯುವತಿಯರು ಲವ್ ಜಿಹಾದಾಗಿಬಿಟ್ಟಿದ್ದಾರೆಂದು ಕೇರಳದಾದ್ಯಂತ ಕರಪತ್ರ ಹಾಗೂ ಪೋಸ್ಟರ್‌ಗಳ ಕ್ಯಾಂಪೇನ್ ಮಾಡಿತು.

ಲವ್ ಜಿಹಾದ್ ನಡೆಯುತ್ತಿದೆಯೇ? 
ವಾಸ್ತವದಲ್ಲಿ ಲವ್ ಜಿಹಾದ್ ಬಗ್ಗೆ 2009ರಿಂದ ಬಿಜೆಪಿ ಸರಕಾರಗಳಿದ್ದ ರಾಜ್ಯಗಳನ್ನೂ ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳ ಪೊಲೀಸರು, ಕೇಂದ್ರದ ಬಿಜೆಪಿ ಸರಕಾರದಡಿ ಎನ್‌ಐಎ ನಡೆಸಿದ ತನಿಖೆಗಳು ಹಾಗೂ ನ್ಯಾಯಲಯಗಳು ನಡೆಸಿದ ಎಲ್ಲಾ ವಿಚಾರಣೆಗಳು ಲವ್ ಜಿಹಾದ್ ಎಂಬ ಒಂದು ವಿದ್ಯಮಾನ ಈ ದೇಶದಲ್ಲಿ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಘೋಷಿಸಿವೆ.

ಕೆಲವು ಮುಖ್ಯ ಉದಾಹರಣೆಗಳು: ಸಯನೈಡ್ ಮೋಹನ್ ಮತ್ತು ಶ್ರೀರಾಮ ಸೇನೆಯ ಲವ್ ಜಿಹಾದ್

2007-09ರಲ್ಲಿ ಮಂಗಳೂರು ಜಿಲ್ಲೆಯ 20-30 ಪ್ರಾಯದ ಹತ್ತಾರು ಮಹಿಳೆಯರು ಕಾಣೆಯಾಗುತ್ತಾ ಹೋದರು. ಆ ಸರಣಿಯಲ್ಲಿ 2009ರ ಜೂನ್ ನಲ್ಲಿ ಬಂಟ್ವಾಳದ 22 ವರ್ಷ ಪ್ರಾಯದ ಅನಿತಾ ಮೂಲ್ಯ ಎಂಬ ಮಹಿಳೆಯು ಕಾಣೆಯಾದದ್ದು ಇಡೀ ಕರ್ನಾಟಕದಲ್ಲಿ ಸುದ್ದಿಯಾಯಿತು. ಅದೇ ಸಂದರ್ಭವನ್ನು ಬಳಸಿಕೊಂಡು ಶ್ರೀರಾಮ ಸೇನೆಯು ಕಾಣೆಯಾದ ಎಲ್ಲಾ ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆಂದು ಹುಯಿಲೆಬ್ಬಿಸಿತು. ಆಗ ಅಧಿಕಾರದಲ್ಲಿದ್ದ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಕೂಡಲೇ ಸಿಐಡಿ ತನಿಖೆಗೆ ಆದೇಶಿಸಿತು. ಲವ್ ಜಿಹಾದ್ ಸಾಬೀತುಪಡಿಸಲು ಚುರುಕಾಗಿ ತನಿಖೆಗೆ ಇಳಿದ ಪೊಲೀಸರಿಗೆ ಸಿಕ್ಕಿದ್ದು ಜಿಹಾದಿಗಳಲ್ಲ. ಬದಲಿಗೆ ಮೋಹನ್ ಕುಮಾರ್ ಎಂಬ ಸೀರಿಯಲ್ ಮತ್ತು ಸಯನೈಡ್ ಕಿಲ್ಲರ್.

ಈತ 2007-09ರ ಅವಧಿಯಲ್ಲಿ 20ರಿಂದ35 ಪ್ರಾಯದ ಬಿಲ್ಲವ ಮತ್ತಿತರ ದಮನಿತ ಹಿಂದೂ ಜಾತಿಗಳಿಗೆ ಸೇರಿದ 19ಕ್ಕೂ ಹೆಚ್ಚು ದುಡಿಯುವ ಮಹಿಳೆಯರನ್ನು ಮದುವೆಯಾಗುವ ಆಮಿಷ ತೋರಿಸಿ ಕೊಂದಿದ್ದ. ನಂತರ ಅವರ ಬಳಿ ಇದ್ದ ಚಿನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ. ಆದರೆ ಆವರೆಗೆ ಹಿಂದೂ ಮಹಿಳೆಯರ ರಕ್ಷಣೆ, ಲವ್ ಜಿಹಾದ್ ಎಂದೆಲ್ಲಾ ವೀರಗಾಸೆ ಮಾಡುತ್ತಿದ್ದ ಹಿಂದೂ ವೀರರು, ದಿಢೀರ್ ಸುಮ್ಮನಾಗಿಬಿಟ್ಟರು! ಹಿಂದೂ ಧರ್ಮದೊಳಗೆ ದಮನಿತ ಜಾತಿಗಳಿಗೆ ಸೇರಿದ ಆ ಬಡ ಮಹಿಳೆ ಯರಿಗೆ ಪ್ರಾಪ್ತ ವಯಸ್ಸಾದರೂ ಏಕೆ ಮದುವೆಯಾಗುತ್ತಿಲ್ಲ? ಮದುವೆಯಾಗದ ಆ ಹೆಣ್ಣುಮಕ್ಕಳು ಮನೆ ಸಾಕುವ ಹೊಣೆ ಹೊತ್ತು ಕುಟುಂಬದಲ್ಲಿ ಹಾಗೂ ಹಿಂದೂ ಸಮಾಜದಲ್ಲಿ ಅನುಭವಿಸುತ್ತಿದ್ದ ಯಾತನೆಗಳೇನು? ಯಾವ ಹತಾಷೆ ಹಾಗೂ ಅಸಹಾಯಕತೆಗಳು ಅಥವಾ ಕನಸುಗಳು ಅವರನ್ನು ಸಯನೈಡ್ ಮೋಹನ್‌ಗೆ ಬಲಿಮಾಡಿತು ಎಂಬ ಪ್ರಶ್ನೆಗಳು ಈ ಹಿಂದೂ ವೀರರಿಗೆ ಹುಟ್ಟಲೇ ಇಲ್ಲ. ಆ ಹಿಂದೂ ಹೆಣ್ಣುಮಕ್ಕಳು ಬಲಿಯಾದದ್ದು ಲವ್ ಜಿಹಾದಿಗಲ್ಲ.. ಬದಲಿಗೆ ಬಡತನ ಮತ್ತು ಹಿಂದೂ ಧರ್ಮದ ಪಿತೃಸ್ವಾಮ್ಯ ವ್ಯವಸ್ಥೆಯ ಜಿಹಾದಿಗೆ..

‘‘ಕರ್ನಾಟಕದಲ್ಲಿ ಲವ್ ಇದೆ-ಜಿಹಾದ್ ಇಲ್ಲ’’- ಸಿಐಡಿ ವರದಿ 
2009ರಲ್ಲೇ ಚಾಮರಾಜನಗರದ ಸೆಲ್ಜಾರಾಜ್ ಎಂಬ ವಯಸ್ಕ ಕ್ರಿಶ್ಚಿಯನ್ ಮಹಿಳೆ ಸ್ವಇಚ್ಛೆಯಿಂದ ಕಣ್ಣೂರಿನ ಅಸ್ಗರ್ ಎಂಬ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದರು. ಸೆಲ್ಜಾ ಅವರ ಅಪ್ಪಕೊಟ್ಟ ದೂರಿನ ಮೇರೆಗೆ ಪೊಲೀಸರು ಅದನ್ನು ಲವ್ ಜಿಹಾದ್ ಪ್ರಕರಣವೆಂದು ನೋಂದಾಯಿಸಿಕೊಂಡರು. ವಿಷಯ ನ್ಯಾಯಾಲಯವನ್ನು ತಲುಪಿ ಕರ್ನಾಟಕ ಹೈಕೋರ್ಟು ವಿಷಯದ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿತು. ಬಿ

ಜೆಪಿ ಸರಕಾರದಡಿಯಿದ್ದ ಪೊಲೀಸರೇ ತನಿಖೆ ನಡೆಸಿ ಸೆಲ್ಜಾ ರಾಜ್-ಅಸ್ಗರ್ ಅವರದ್ದು ಸ್ವಚ್ಛಂದ ಪ್ರೇಮವಿವಾಹವೇ ವಿನಾ ಲವ್ ಜಿಹಾದೆಂಬುದೇನೂ ಇಲ್ಲವೆಂದು ವರದಿ ಕೊಟ್ಟ್ಟರು. ಹೀಗಾಗಿ ಸೆಲ್ಜಾರಾಜ್-ಅಸ್ಗರ್ ದಂಪತಿಯ ವೈವಾಹಿಕ ಜೀವನಕ್ಕೆ ಹೈಕೋರ್ಟು ಅವಕಾಶ ನೀಡಿತು. ಆದರೂ ಹಿಂದೂ ಸಂಘಟನೆಗಳು ಆರೋಪಿಸುವಂತೆ ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆಯೇ ಎಂದು ತನಿಖೆ ಮಾಡಿ ವರದಿ ಮಾಡಲು ಸಿಐಡಿಗೆ ಆದೇಶಿಸಿತು. ಅದರಂತೆ 2005-09ರ ನಡುವೆ ನಾಪತ್ತೆಯಾದ ಮಹಿಳೆಯರ ತನಿಖೆಯನ್ನು ಕೈಗೊಂಡ ಸಿಐಡಿ ಅಂತಹ 21,890 ಪ್ರಕರಣಗಳನ್ನು ಗುರುತಿಸಿತು. ಹಾಗೂ ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳ ಬಳಿ ಇರುವ ಮಾಹಿತಿಗಳನ್ನು ಪಡೆದುಕೊಳ್ಳಲು ಮುಂದಾಯಿತು. ಆದರೆ ಸಿಐಡಿಯ ಪ್ರಕಾರ ಹಿಂದೂ ಸಂಘಟನೆಗಳು ಈ ಬಗ್ಗೆ ಯಾವ ಉಪಯುಕ್ತ ಮಾಹಿತಿಗಳನ್ನೂ ಕೊಡಲಿಲ್ಲ!

ಸಿಐಡಿ ಕಲೆಹಾಕಿದ ಮಾಹಿತಿಯ ಪ್ರಕಾರ ನಾಪತ್ತೆಯಾದ ಪ್ರಕರಣಗಳಲ್ಲಿ 229 ಮಹಿಳೆಯರು ಮಾತ್ರ ಅಂತರ್‌ಧರ್ಮೀಯ ಮದುವೆಯಾಗಿದ್ದರು. ಹಾಗೂ ಅದರಲ್ಲಿ 63 ಪ್ರಕರಣಗಳಲ್ಲಿ ಮಾತ್ರ ಮತಾಂತರವಾಗಿತ್ತು. ಆದರೆ ಹಿಂದೂ ಮಹಿಳೆಯರು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದಂತೆ, ಮುಸ್ಲಿಂ ಮಹಿಳೆಯರು ಹಿಂದೂ ಪುರುಷರನ್ನೂ ಹಾಗೂ ಕ್ರಿಶ್ಚಿಯನ್ ಮಹಿಳೆಯರು ಮುಸ್ಲಿಂ ಪುರುಷರನ್ನೂ ಮದುವೆಯಾದ ಉದಾಹರಣೆಗಳಿದ್ದವು.

ಈ ಎಲ್ಲಾ ತನಿಖೆಗಳನ್ನು ಆಧರಿಸಿ 2009ರ ಡಿಸೆಂಬರ್‌ನಲ್ಲಿ ಕರ್ನಾಟಕ ಸಿಐಡಿಯು ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆದಿಲ್ಲವೆಂದು ಸ್ಪಷ್ಟವಾದ ವರದಿಯನ್ನು ಕೋರ್ಟಿಗೆ ಸಲ್ಲಿಸಿತು. ಇದನ್ನು ಆಧರಿಸಿ ಕರ್ನಾಟಕ ಹೈಕೋರ್ಟಿನ ದ್ವಿಸದಸ್ಯ ಪೀಠ 2013ರಲ್ಲಿ ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣಗಳಿಲ್ಲವೆಂದು ವಿಚಾರಣೆಯನ್ನು ಮುಕ್ತಾಯ ಮಾಡಿತು. ಸಿಐಡಿಯು ತನ್ನ ವರದಿಯಲ್ಲಿ ಹಿಂದೂ ಮಹಿಳೆಯರ ನಾಪತ್ತೆ ವಿದ್ಯಮಾನದಲ್ಲಿ ಲವ್ ಜಿಹಾದಿಗಿಂತ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವ ಧರ್ಮಾತೀತ ದಲ್ಲಾಳಿ ಗುಂಪುಗಳ ಹಾವಳಿ ಹೆಚ್ಚು ಕಳವಳಕಾರಿ ಎಂದು ಗುರುತಿಸಿತ್ತು. ಆದರೆ ಇದನ್ನು ನಿಗ್ರಹಿಸಲು ಸರಕಾರ ಕಠಿಣಕ್ರಮ ತೆಗೆದುಕೊಳ್ಳಬೇಕೆಂಬ ಯಾವ ಆಗ್ರಹಗಳನ್ನು ಈ ಸ್ವಘೋಷಿತ ಹಿಂದೂ ರಕ್ಷಕರು ಮಾಡಲೇ ಇಲ್ಲ.

ಆಸಕ್ತರು ಕರ್ನಾಟಕ ಹೈಕೋರ್ಟಿನ ಆದೇಶವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

http://judgmenthck.kar.nic.in/judgments/bitstream/123456789/907138/1/WPHC158-09-06-11-2013.pdf 

ಕೇರಳದಲ್ಲೂ ಲವ್ ಜಿಹಾದಿಲ್ಲ-ಹೈಕೋರ್ಟ್

ಅದೇ ಅವಧಿಯಲ್ಲಿ ಕೇರಳದಲ್ಲೂ ಹಿಂದೂ ಜನಜಾಗೃತಿ ಇನ್ನಿತ್ಯಾದಿ ಹಿಂದೂತ್ವವಾದಿ ಸಂಘಟನೆಗಳು ಕೇರಳದಲ್ಲಿ 30,000ಕ್ಕೂ ಹೆಚ್ಚು ಹಿಂದೂ ಮಹಿಳೆಯರು ಲವ್ ಜಿಹಾದಿಗೆ ಬಲಿಯಾಗಿದ್ದಾರೆಂದು ಆಕ್ರಮಣಕಾರಿ ಪ್ರಚಾರ ಪ್ರಾರಂಭಿಸಿದ್ದವು. ಹೀಗಾಗಿ ಕೇರಳ ಹೈಕೋರ್ಟ್ ಸಹ ಈ ಬಗ್ಗೆ ತನಿಖೆಯನ್ನು ಮಾಡಲು ಕೇರಳದ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿತು.

ಅದರಂತೆ ಕೂಲಂಕಷವಾದ ತನಿಖೆ ಕೈಗೊಂಡ ಕೇರಳದ ಪೊಲೀಸರು ಕೇರಳದಲ್ಲೆಲ್ಲೂ ಯಾವುದೇ ಅಂತರ್‌ರಾಷ್ಟ್ರೀಯ ಷಡ್ಯಂತ್ರದ ಭಾಗವಾಗಿ ಯಾವುದೇ ಮುಸ್ಲಿಂ ಸಂಘಟನೆಗಳು ವ್ಯವಸ್ಥಿತವಾಗಿ ಹಿಂದೂ ಮಹಿಳೆಯರನ್ನು ಲವ್ ಜಿಹಾದಿನ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ ಎಂಬುದು ಪತ್ತೆಯಾಗಿಲ್ಲ ಎಂದು ವರದಿ ಕೊಟ್ಟರು. ಮಾತ್ರವಲ್ಲ, ಹಾಗೆ ಸುಳ್ಳು ಪ್ರಚಾರ ಮಾಡಿ ಸಮಾಜದ ಶಾಂತಿ ಭಂಗ ಮಾಡಿದ್ದಕ್ಕಾಗಿ ಹಿಂದೂ ಜನಜಾಗೃತಿ ಸಂಘಟನೆಯ ಮೇಲೆ ಎಫ್‌ಐಆರ್ ದಾಖಲಿಸಿದರು. ಈ ವರದಿಯನ್ನು ಆಧರಿಸಿ ಕೇರಳದ ಹೈಕೋರ್ಟು 2012ರಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಿತು.

ಅಖಿಲಾ ಎಂಬ ಹಾದಿಯಾ ಮತ್ತು ವ್ಯಕ್ತಿ ಸ್ವಾತಂತ್ರ್ಯ
ಹೀಗೆ ಕೋರ್ಟುಗಳು ಮತ್ತು ಪೊಲೀಸ್ ತನಿಖೆಗಳು ಅಧಿಕೃತವಾಗಿ ಲವ್ ಜಿಹಾದನ್ನು ನಿರಾಕರಿಸಿದ ನಂತರ ಇದರ ಸುತ್ತ ಸ್ವಘೋಷಿತ ಹಿಂದೂ ರಕ್ಷಕರ ಹುಯಿಲೂ ಕಡಿಮೆಯಾಗಿತ್ತು. ಆದರೆ 2016ರಲ್ಲಿ ಕೇರಳದಲ್ಲಿ ಅಖಿಲಾ ಎಂಬ 24 ವರ್ಷದ ಹಿಂದೂ ಯುವತಿ ಸ್ವ ಇಚ್ಛೆಯ ಮೇರೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ಹಾದಿಯಾ ಆದಳು. ಆ ನಂತರ ಮುಸ್ಲಿಂ ಯುವಕನನ್ನು ಮದುವೆಯಾದಳು.

ಈ ಮದುವೆಯ ಬಗ್ಗೆ ಸಮ್ಮತಿ ಇರದ ಅವರ ತಂದೆ ಅಶೋಕನ್ ಇದು ಬಲವಂತದ ಮತಾಂತರ ಹಾಗೂ ಮದುವೆ ಎಂದು ದೂರಿತ್ತಿದ್ದರಿಂದ ಈ ಪ್ರಕರಣ ಹಿಂದೂ ಸಂಘಟನೆಗಳಿಗೆ ಆಹಾರವಾಯಿತು. ಪ್ರಕರಣವು ಹೈಕೋರ್ಟಿನ ಮೆಟ್ಟಿಲೇರಿ, ಕೇರಳ ಹೈಕೋರ್ಟು ಹಿಂದೆಮುಂದೆ ನೋಡದೆ ಇದೊಂದು ಲವ್ ಜಿಹಾದ್ ಪ್ರಕರಣವೆಂದು ಪರಿಗಣಿಸಿ ಸಾಂವಿಧಾನಿಕವಾಗಿ ತನ್ನಿಚ್ಛೆ ಬಂದವರನ್ನು ಮದುವೆಯಾಗುವ ವಯಸ್ಸು ಹಾಗೂ ಅಧಿಕಾರ ಹೊಂದಿದ್ದ ಹಾದಿಯಾಳ ನಿರ್ಧಾರವನ್ನು ಅಸಿಂಧುವೆಂದು ಘೋಷಿಸಿ ಮದುವೆಯನ್ನು ರದ್ದುಪಡಿಸಿತು. ಇದರ ವಿರುದ್ಧ ಹಾದಿಯಾಳ ಪತಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು.

2018ರಲ್ಲಿ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತನ್ನ ಅಂತಿಮ ತೀರ್ಮಾನವನ್ನು ಘೋಷಿಸಿತು. ಅದು ಹೈಕೋರ್ಟಿನ ವಿಚಾರಣೆ ಹಾಗೂ ತೀರ್ಪಿನ ಬಗ್ಗೆ ತೀವ್ರವಾದ ಅಸಂತೋಷವನ್ನು ವ್ಯಕ್ತಪಡಿಸುತ್ತಾ ಅದರ ಆದೇಶವನ್ನು ರದ್ದುಗೊಳಿಸಿತು ಹಾಗೂ: ‘‘ಮದುವೆಯೆಂಬುದು ಒಬ್ಬ ವ್ಯಕ್ತಿಯ ಖಾಸಗಿ ವಿಷಯ. ಅವರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ವಿಷಯ. ಅದರಲ್ಲಿ ಮೂಗುತೂರಿಸುವ ಅಧಿಕಾರ ಪ್ರಭುತ್ವಕ್ಕಿಲ್ಲ. ವ್ಯಕ್ತಿಗಳ ಈ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕಿರುವುದು ಕೋರ್ಟುಗಳ ಕರ್ತವ್ಯ. ನಮ್ಮ ಸಮಾಜದ ಸ್ಥಿರತೆಯು ನಮ್ಮ ಸಮಾಜದ ಬಹುಸಂಸ್ಕೃತಿಯನ್ನೇ ಆಧರಿಸಿದೆ. ನಮ್ಮ ಸಂವಿಧಾನವು ಅದನ್ನು ರಕ್ಷಿಸುತ್ತದೆ.’’ ಎಂದು ಸ್ಪಷ್ಟ ಮಾತುಗಳಲ್ಲಿ ಸ್ವಇಚ್ಛೆಯಿಂದ ತನಗಿಷ್ಟ ಬಂದ ಮತವನ್ನು ಆಚರಿಸುವ ಹಾಗೂ ಸ್ವಇಚ್ಛೆಯಿಂದ ತನಗೆ ಇಷ್ಟ ಬಂದವರನ್ನು ಮದುವೆಯಾಗುವ ಹಾದಿಯಾಳ ಹಕ್ಕನ್ನು ಮಾತ್ರವಲ್ಲದೆ ಈ ದೇಶದ ಎಲ್ಲಾ ಜನರ ಹಕ್ಕನ್ನು ಎತ್ತಿಹಿಡಿಯಿತು.

ಆಸಕ್ತರು ಆ ತೀರ್ಪಿನ ಪೂರ್ಣ ಪಠ್ಯವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://main.sci.gov.in/supremecourt/ 2017/19702/19702_2017_Judgement_08-Mar-2018.pdf 

ಆದರೂ ಅದೇ ಸಮಯದಲ್ಲಿ ಇಂತಹ ಮದುವೆಗಳ ಹಿಂದೆ ಯಾವುದಾದರೂ ವ್ಯವಸ್ಥಿತ ಪಿತೂರಿಯಿದೆಯೇ ಎಂದು ತನಿಖೆ ಮಾಡುತ್ತಿದ್ದ ಎನ್‌ಐಎಯು ತನಿಖೆ ಮುಂದುವರಿಸಿ ಸುಪ್ರೀಂ ಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಲು ಕೂಡಾ ಆದೇಶಿಸಿತು. ಕೇಂದ್ರ ಬಿಜೆಪಿ ಸರಕಾರದಡಿ ಇರುವ ಎನ್‌ಐಎಯು 

ಕೂಡಾ ತನ್ನ ತನಿಖೆಯನ್ನು 2018ರಲ್ಲಿ ಪೂರ್ಣಗೊಳಿಸಿತು ಮತ್ತು ಲವ್ ಜಿಹಾದ್‌ನಂತಹ ಯಾವ ವಿದ್ಯಮಾನವೂ ಇಲ್ಲವೆಂದು ವರದಿ ಮಾಡಿತು. (https://thewire.in/politics/nia-love-jihad-kerala-hadiya

ಯೋಗಿ ಪೊಲೀಸರೂ ಲವ್ ಜಿಹಾದ್ ಇಲ್ಲವೆಂದರು!
 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿಯು ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಭೂತವನ್ನು ಹುಟ್ಟುಹಾಕಿ ಜಾಟರ ಮತ್ತು ಮುಸ್ಲಿಮರ ನಡುವೆ ಕೋಮು ಧ್ರುವೀಕರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು. ಆ ನಂತರ 2017ರ ರಾಜ್ಯದ ಶಾಸನ ಸಭಾ ಚುನಾವಣೆಯ ಸಂದರ್ಭದಲ್ಲಿ ಮತ್ತೊಮ್ಮೆ ಲವ್ ಜಿಹಾದ್ ಅಪಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಎಬ್ಬಿಸಿತು. ಹಾಗೂ ರೋಮಿಯೋ ಸ್ಕ್ವಾಡ್ ಇನ್ನಿತ್ಯಾದಿ ಗಿಮಿಕ್ಕುಗಳನ್ನು ಮಾಡಿತು. ಯೋಗಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಒಂದು ವಿಶೇಷ ತನಿಖಾ ದಳವನ್ನೇ (ಎಸ್‌ಐಟಿ) ನೇಮಿಸಿತು. ಅದಕ್ಕೆ 14 ಪ್ರಮುಖ/ಪ್ರಖ್ಯಾತ ಪ್ರಕರಣಗಳನ್ನು ವಹಿಸಿಕೊಡಲಾಯಿತು.

ತಮ್ಮದೇ ಮಾಧ್ಯಮಗಳಲ್ಲಿ ಇದರ ಬಗ್ಗೆ ಮನಸ್ಸಿಗೆ ಬಂದಂತೆ ತಳಬುಡವಿಲ್ಲದ ಪ್ರಚಾರವನ್ನೂ ಮಾಡಿಸಿತು. ಆದರೆ ಎರಡು ತಿಂಗಳ ಕೆಳಗೆ ಪ್ರಾಥಮಿಕ ವರದಿ ನೀಡಿರುವ ಉತ್ತರ ಪ್ರದೇಶದ ಪೊಲೀಸರು ಮೊದಲ ಏಳು ಪ್ರಕರಣಗಳಲ್ಲಿ ಯಾವುದೇ ಲವ್ ಜಿಹಾದ್ ನಡೆದಿಲ್ಲವೆಂದು ವರದಿ ನೀಡಿದರು. ಆಗ ಯೋಗಿಯ ಸಹಾಯಕ್ಕೆ ಬಂದಿದ್ದು ಅಲಹಾಬಾದ್ ಹೈಕೋರ್ಟಿನ ಮೇಲೆ ಉಲ್ಲೇಖಿಸಲಾದ ಏಕ ಸದಸ್ಯ ಪೀಠದ ತೀರ್ಪು. ಕೂಡಲೇ ಅದನ್ನು ಆಧರಿಸಿ ಯೋಗಿ ಸರಕಾರ ಸುಗ್ರೀವಾಜ್ಞೆ ತಂದಿತು. ಆದರೆ ಈಗಾಗಲೇ ಉಲ್ಲೇಖಿಸಿದಂತೆ ಯಾವ ಆದೇಶವನ್ನು ಆಧರಿಸಿ ಯೋಗಿ ಸರಕಾರ ಕರಾಳ ಲವ್ ನಿಷೇಧ ಕಾನೂನು ತಂದಿತೋ ಆ ತೀರ್ಪನ್ನು ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವೇ ರದ್ದು ಪಡಿಸಿದೆ. ಅಷ್ಟು ಮಾತ್ರವಲ್ಲ. ಒಂದು ವಾರದ ಕೆಳಗೆ ಯೋಗಿ ಪೊಲೀಸರೇ ಎಸ್‌ಐಟಿಗೆ ವಹಿಸಲಾದ ಯಾವುದೇ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿದೆಯೆಂಬುದಕ್ಕೆ ಪುರಾವೆಯಿಲ್ಲವೆಂದು ವರದಿ ಮಾಡಿದ್ದಾರೆ.

ಅದಕ್ಕೆ ಸಂಬಂಧಪಟ್ಟ ಪತ್ರಿಕಾವರದಿಯನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು: https://scroll.in/latest/979287/love-jihad-cases-in-kanpur-sit-finds-no-proof-of-conspiracy-or-foreign-funding

ಹೀಗೆ ಈವರೆಗೆ ಈ ದೇಶದಲ್ಲಿ ಲವ್ ಜಿಹಾದ್ ಎಂಬುದನ್ನು ಸಾಬೀತು ಮಾಡಬಲ್ಲ ಒಂದೇ ಒಂದು ಉದಾಹರಣೆ ಇಲ್ಲ. ಅದರ ಅರ್ಥ ಬಲವಂತದ ಮದುವೆ ನಡೆಯುತ್ತಿಲ್ಲವೆಂದಲ್ಲ. ಅದು ಎಲ್ಲಾ ಧರ್ಮಗಳ ಮಹಿಳೆಯರು ಎದುರಿಸುತ್ತಿರುವ ಶೋಷಣೆ. ಅದನ್ನು ತಡೆಯಲು ಈಗಾಗಲೇ ಹಲವು ಕಾನೂನುಗಳಿವೆ. ಹೀಗಿದ್ದರೂ ಬಿಜೆಪಿಯು ಕೋವಿಡ್ ಸಂದರ್ಭದಲ್ಲಿ ಲವ್ ಜಿಹಾದ್ ಭೂತವನ್ನು ಬಡಿದೆಬ್ಬಿಸುತ್ತಿರುವುದೇತಕ್ಕೆ?

ಒಂದು ದೇಶ- ಒಂದೇ ಧರ್ಮ, ಜನಾಂಗ
ಇದರ ಹಿಂದೆ ಎರಡು ಫ್ಯಾಶಿಸ್ಟ್ ಅಜೆಂಡಾಗಳಿವೆ.

ಮೊದಲನೆಯದು ತುರ್ತಿನದು- ಕೋವಿಡ್ ದಾಳಿಯ ಜೊತೆಗೆ ಮೋದಿ ಸರಕಾರದ ದಾಳಿಯೂ ಸೇರಿ ದೇಶದ ಆರ್ಥಿಕತೆ ಇತಿಹಾಸದಲ್ಲೇ ಕಂಡರಿಯದ ಹಿಂದ್ಸರಿತವನ್ನು ಅನುಭವಿಸುತ್ತಿದೆ. ನಿರುದ್ಯೋಗ, ಕೃಷಿ ಬಿಕ್ಕಟ್ಟು, ಬೆಲೆ ಏರಿಕೆ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News