ಬಶೀರ್ ಮುಸ್ಲಿಯಾರ್

Update: 2020-12-03 12:23 GMT

ಪುತ್ತೂರು : ಕೊಯಿಲ ಗ್ರಾಮದ ಹೇಂತಾರು ನಿವಾಸಿ ವಿ.ಎ. ಬಶೀರ್ ಮುಸ್ಲಿಯಾರ್ (57) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

 ಮೂಲತಃ ವಿಟ್ಲ ನಿವಾಸಿ ಆಗಿರುವ ಬಶೀರ್ ಮುಸ್ಲಿಯಾರ್ ಅವರು ತನ್ನ ಪತ್ನಿಯ ತವರು ಮನೆಯಾದ ಆತೂರು ಹೇಂತಾರ್ ನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಅಲ್ಲೇ ನೆಲೆಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಮೃತರ ಧಫನ ಕಾರ್ಯ ನಡೆಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ