ಪರಪ್ಪನ ಅಗ್ರಹಾರದ ಕೈದಿಗಳಿಗೆ ‘ವಿಡಿಯೋ ಕಾಲ್’ ಸೌಲಭ್ಯ

Update: 2020-12-04 16:13 GMT

ಬೆಂಗಳೂರು, ಡಿ.4: ಕೊರೋನ ಸೋಂಕಿನ ಸಂಬಂಧ ಭೇಟಿ ಸಾಧ್ಯವಾಗದ ಹಿನ್ನೆಲೆ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಕೈದಿಗಳಿಗೆ ಇಂದಿನಿಂದ ವಿಡಿಯೋಕಾಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ.

ಕೋವಿಡ್ ಭೀತಿ ಹಿನ್ನೆಲೆ ಜೈಲಿಗೆ ಹೊರಗಿನವರ ಪ್ರವೇಶ ರದ್ದುಪಡಿಸಲಾಗಿದ್ದು, ಜೈಲಿಗೆ ಪ್ರವೇಶಿಸುವ ಕೈದಿಗಳನ್ನು ಸಹ ಕ್ವಾರಂಟೈನ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ, ಕೈದಿಗಳಿಗೆ ಕುಟುಂಬಸ್ಥರ ಭೇಟಿಯನ್ನು ನಿಲ್ಲಿಸಲಾಗಿತ್ತು.

ಕಳೆದ ಆರು ತಿಂಗಳಿನಿಂದ ಕುಟುಂಬಸ್ಥರನ್ನು ಕಂಡಿಲ್ಲ ಎಂದು ಜೈಲಿನ ಕೈದಿಗಳಿಂದ ಅಧಿಕಾರಿಗಳಿಗೆ ಸಾಕಷ್ಟು ದೂರು ಸಲ್ಲಿಕೆಯಾಗಿದ್ದವು. ಹಾಗಾಗಿ, ಕಾರಾಗೃಹದ ಅಧಿಕಾರಿಗಳು ವಿಡಿಯೋ ಕರೆಗಳಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇಂದಿನಿಂದಲೇ(ಡಿ.5) ಕಾರ್ಯರೂಪಕ್ಕೆ ತರಲು ಮುಂದಾಗಿರುವ ಅಧಿಕಾರಿಗಳು ಜೈಲಿನಲ್ಲಿ ಇದಕ್ಕಾಗಿಯೇ ಒಂದು ಪ್ರತ್ಯೇಕ ಕೊಠಡಿ ಮೀಸಲಿಟ್ಟಿದ್ದಾರೆ. ಓರ್ವ ಕೈದಿಗೆ ನಾಲ್ಕರಿಂದ ಐದು ನಿಮಿಷದಷ್ಟು ಸಮಯ ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News