ಲಾಕ್​ಡೌನ್ ಬಳಿಕ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭ

Update: 2020-12-04 17:20 GMT

ಬೆಂಗಳೂರು, ಡಿ.4: ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭವಾಗುತ್ತಿದ್ದು, ಡಿ.7 ರಿಂದ 17 ರವರೆಗೆ ಬೆಂಗಳೂರಿನಿಂದ ನಾಲ್ಕು ದಿಕ್ಕುಗಳಲ್ಲಿ ಯೂಸಬ್ ಅರ್ಬನ್ ರೈಲು ಸಂಚಾರ ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆ ಘೋಷಣೆ ಮಾಡಿದೆ.

ಮಾರ್ಚ್ 25ರ ಬಳಿಕ ಅಂದರೆ ಲಾಕ್ ಡೌನ್ ಹೇರಿಕೆ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ಬುಕ್ಕಿಂಗ್ ರಹಿತ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ರೈಲುಗಳು ಈ ಹಿಂದೆ ಕೇಂದ್ರ ಸರಕಾರ ಸೌಥ್ ವೆಸ್ಟ್ ರೈಲ್ವೇಗೆ ಘೋಷಣೆ ಮಾಡಲಾಗಿದ್ದ 26 ರೈಲುಗಳ ಯೋಜನೆಯ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News