ಸಮಗ್ರ ಕನ್ನಡ ಭಾಷಾ ಕಾಯ್ದೆ ರೂಪಿತವಾಗಲಿ: ಡಾ.ಎಲ್.ಹನುಮಂತಯ್ಯ

Update: 2020-12-06 17:09 GMT

ಬೆಂಗಳೂರು, ಡಿ. 6: ರಾಜ್ಯ ಸರಕಾರ ಕನ್ನಡ ಭಾಷಾ ಬಳಕೆ. ಶಿಕ್ಷಣ ಮತ್ತು ಸಂಶೋಧನೆ, ಉದ್ಯೋಗ, ನ್ಯಾಯಾಲಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಕನ್ನಡ ಭಾಷಾ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದ್ದಾರೆ.

ರವಿವಾರ ಬಸವನಗುಡಿ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಬಿಎಂಶ್ರೀ ಪ್ರತಿಮೆ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಶಾಲೆಗೆ ಗೌರವ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಪುರಸ್ಕಾರ ನೀಡಿ ಮಾತನಾಡಿ ಅವರು, ಕನ್ನಡ ಮಾಧ್ಯಮದ ಮಕ್ಕಳಿಗೆ ನಗದು ನೀಡಿ ಸನ್ಮಾನಿಸುತ್ತಿರುವುದು ಸಂತೋಷವಾಗಿದೆ ಎಂದರು.

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಮಾತನಾಡಿ, ಕಳೆದ 26 ವರ್ಷಗಳಿಂದ ಡಾ.ಎಂ.ಚಿದಾನಂದ ಮೂರ್ತಿ ಹಾಕಿಕೊಟ್ಟ ಮಾರ್ಗದಲ್ಲಿ ‘ಕನ್ನಡ-ಕನ್ನಡಿಗ-ಕರ್ನಾಟಕ’ ಪುಸ್ತಕದಿಂದ ಬರುವ ಗೌರವಧನದಿಂದ ಮಕ್ಕಳಿಗೆ ಬಹುಮಾನ-ಸನ್ಮಾನ ಮಾಡಲಾಗುತ್ತಿದೆ. ಕನ್ನಡ ಕಾಯಕ ವರ್ಷದಲ್ಲಿ ಕರ್ನಾಟಕ ಸರಕಾರವು  ‘ಸಮಗ್ರ ಕನ್ನಡ ಭಾಷಾ ಕಾಯಿದೆ’ಯನ್ನು ರೂಪಿಸಿ ಕನ್ನಡದ ಸರ್ವಾಂಗೀಣ ಪ್ರಗತಿಗೆ ನೆರವಾಗಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News