ಸಚಿವಾಲಯದ 28 ಮಂದಿಗೆ ಶಾಖಾಧಿಕಾರಿ ಹುದ್ದೆಗೆ ಮುಂಭಡ್ತಿ
ಬೆಂಗಳೂರು, ಡಿ. 16: ರಾಜ್ಯ ಸರಕಾರದ ಸಚಿವಾಲಯದ 28 ಮಂದಿ ಹಿರಿಯ ಸಹಾಯಕರುಗಳಿಗೆ ವೇತನ ಶ್ರೇಣಿಯನ್ನು ಹೆಚ್ಚಿಸಿ, ಮುಂಭಡ್ತಿ ನೀಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯುಕ್ತಿಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ವಿ.ಶಂಕರ್ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.
ಗೀತಾಲಕ್ಷ್ಮಿ ಎಚ್.ಡಿ.-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಜನಸ್ಪಂದನ, ಮಮತಾ ಶರ್ಮ ಎಸ್.-ಸಿಆಸು ಇಲಾಖೆ, ಪ್ರೇಮಲತಾ-ರಾಜ್ಯ ಮಾನವ ಹಕ್ಕುಗಳ ಆಯೋಗ ನಿಯೋಜನೆ ಮೇರೆಗೆ, ಭಾರತಿ ಪಿ.-ಕೃಷಿ ಇಲಾಖೆ, ಮೆಹಬೂಬ್ ಖಾನ್- ಆರ್ಥಿಕ ಇಲಾಖೆ, ರಂಜಿತ ವಿ.-ಕಾನೂನು ಇಲಾಖೆ, ಸಿದ್ದಿಕ್ ಪಾಷ-ಆರ್ಥಿಕ ಇಲಾಖೆ, ಲಕ್ಷ್ಮಿದೇವಿ ಆರ್-ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೀಪಾ ಲೋಕರೆ- ವಸತಿ ಇಲಾಖೆ, ದಾಕ್ಷಾಯಿಣಿ ಜಿ.ಬಿ.-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.
ತ್ರೀವೇಣಿ ಎಸ್.ಎಲ್.-ಸಿಆಸು ಇಲಾಖೆ, ಸುಪ್ರಿಯ ಪತ್ತಾರ-ಸಿಆಸು ಇಲಾಖೆ, ಲಕ್ಷ್ಮೀ ಎಚ್.ವಿ.-ಜಲಸಂಪನ್ಮೂಲ ಇಲಾಖೆ, ಅನುಪಮಾ ಕೆ.ಆರ್.-ಸಿಆಸು ಇಲಾಖೆ, ಕಲಾವತಿ ಕೆ.-ಜಲಸಂನ್ಮೂಲ ಇಲಾಖೆ, ಶಬಾನಾ-ವೈದ್ಯಕೀಯ ಶಿಕ್ಷಣ ಇಲಾಖೆ, ಫಾತಿಮಾ ಜಾಹೀರಾ-ವೈದ್ಯಕೀಯ ಶಿಕ್ಷಣ ಇಲಾಖೆ, ನಗೀನಾ ಎಸ್.-ವೈದ್ಯಕೀಯ ಶಿಕ್ಷಣ ಇಲಾಖೆ, ವನಜಾಕ್ಷಿ ಎಸ್.-ಕಂದಾಯ ಇಲಾಖೆ, ರಾಜಪ್ಪ ಕೆ.ಎಚ್.-ಕ್ರೀಡಾ ಮತ್ತು ಕಂದಾಯ ಇಲಾಖೆ, ರಾಘವೇಂದ್ರ ಎಸ್.ಆರ್.-ಶಿಕ್ಷಣ ಇಲಾಖೆ, ರಾಜೇಶ್ ಎಸ್.-ಸಿಆಸು ಇಲಾಖೆ, ಸಂತೋಷ್ ಕುಮಾರ್ ಎಸ್.-ಕಂದಾಯ ಇಲಾಖೆ, ಪುಷ್ಪಾಬಾಯಿ- ಸಿಆಸು ಇಲಾಖೆ, ಮೋಹನ್ ದಾಸ್-ಕಂದಾಯ ಇಲಾಖೆ, ಮಹೇಶ್ ತಿರ್ಲಾಪುರ-ಕಂದಾಯ ಇಲಾಖೇ ಹಾಗೂ ಗೋಪಾಲ ಆ.ನಾ.ಸ ಮತ್ತು ಗ್ರಾ.ವ್ಯ.ಇಲಾಖೆ.
ಮುಂಭಡ್ತಿ: ಹಿರಿಯ ಸಹಾಯಕರಿಗೆ ಶಾಖಾಧಿಕಾರಿಗಳಾಗಿ ಮುಂಭಡ್ತಿ ನೀಡಿದ್ದು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯುಕ್ತಿಗೊಳ್ಳುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಬಿ.ವಿಜಯಮುನಿ-ನಗರಾಭಿವೃದ್ಧಿ ಇಲಾಖೆ, ಬಿ.ಕೆ.ಸಂದೀಪ್-ಸಿಆಸು ಇಲಾಖೆ, ಎಸ್.ಎನ್.ಚಂದ್ರಕಲಾ-ಸಿಆಸು ಇಲಾಖೆ, ಬಿ.ಎಂ.ತ್ರೀವೇಣಿ- ಗ್ರಾಮೀಣಾಭಿವೃದ್ಧಿ ಇಲಾಖೆ, ಯು.ಎಲ್.ಎನ್. ಫಣಿರಾಜ್ ಕುಮಾರ್-ಮೂಲಸೌಲಭ್ಯ ಆಭಿವೃದ್ಧಿ ಇಲಾಖೆ, ಎ.ರೂಪ-ಒಳಾಡಳಿತ ಇಲಾಖೆ ಹಾಗೂ ಸಾಕಮ್ಮ-ಗ್ರಾಮೀಣಾಭಿವೃದ್ಧಿ ಇಲಾಖೆ.