×
Ad

ಬೆಂಗಳೂರಿನ 10 ಕಡೆಗಳಲ್ಲಿ ಐಟಿ ದಾಳಿ: ದಾಖಲೆ ಪತ್ರಗಳ ವಶ

Update: 2020-12-17 17:17 IST

ಬೆಂಗಳೂರು, ಡಿ.17: ಏಟ್ರಿಯಾ ಕನ್ವರ್ಸೇಶನ್ ಟೆಕ್ನಾಲಜಿಯ ನಗರದ ಆಕ್ಟ್ ಗ್ರೂಪ್ ಕಚೇರಿ ಸೇರಿ 10 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ಮುಂಜಾನೆ ದೇಶದ ಐದನೇ ದೊಡ್ಡ ಇಂಟರ್‍ನೆಟ್ ಸರಬರಾಜು ಗ್ರೂಪ್ ಆಗಿರುವ ಆಕ್ಟ್ ನ ಇಂಡಿಯನ್ ಎಕ್ಸ್‍ಪ್ರೆಸ್ ವೃತ್ತದ ಮುಖ್ಯ ಕಚೇರಿ ಸೇರಿ 10 ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಗ್ರೂಪ್ ಮಾಲಕರಾಗಿರುವ ಸುಂದರ್ ರಾಜ್ ಅವರ ಮನೆ ಮೇಲೂ ದಾಳಿ ನಡೆಸಿ ಕೆಲ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News