ಓಂಪ್ರಕಾಶ್‍ಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ
Update: 2020-12-17 23:59 IST
ಬೆಂಗಳೂರು, ಡಿ. 17: ನಗರದ ಸಂಶೋಧನಾ ವಿದ್ಯಾರ್ಥಿ ಓಂಪ್ರಕಾಶ್ ಎಸ್.ಎಸ್. ಅವರು ಮಂಡಿಸಿದ್ದ ‘ಫ್ಯಾಬ್ರಿಕೇಷನ್ ಆಫ್ ಅಮೋರ್ಫಸ್ ಮೆಟಲ್ ಆಕ್ಸೈಡ್ ಥಿನ್ ಫಿಲ್ಮ್ ಟ್ರಾನ್ಸಿಸ್ಟರ್ ಯೂನಿಟ್ ಕಸ್ಟಂ ಡಿಸೈನ್ಡ್ ಸ್ಪಿನ್ ಸ್ಪ್ರೇ ಪೈರಾಲಿಸಿಸ್ ಯೂನಿಟ್' ವಿಷಯ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ.
ಮಂಗಳೂರು ವಿವಿಯ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ.ಎಸ್.ಕೆ.ನವೀನ್ ಕುಮಾರ್ ಅವರು, ಸಂಶೋಧನಾ ವಿದ್ಯಾರ್ಥಿ ಓಂಪ್ರಕಾಶ್ ಅವರಿಗೆ ಮಾರ್ಗದರ್ಶನ ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.