×
Ad

ಇಂಡಿಯನ್ ಆಯಿಲ್‍ನಿಂದ ‘ಚೋಟು’ ಸಿಲಿಂಡರ್ ಬಿಡುಗಡೆ

Update: 2020-12-18 22:35 IST

ಬೆಂಗಳೂರು, ಡಿ.18: ಇಂಡಿಯನ್ ಆಯಿಲ್ ಇತ್ತೀಚೆಗೆ ಬೆಂಗಳೂರಿನಲ್ಲಿ ‘ಚೋಟು’ ಎಂಬ 5 ಕೆ.ಜಿ. ಮುಕ್ತ ಮಾರಾಟದ ಎಲ್.ಪಿ.ಜಿ. (ಎಫ್.ಟಿ.ಎಲ್.) ಸಿಲಿಂಡರ್ ಗಳಿಗೆ ಚಾಲನೆ ನೀಡಿದೆ. ಕರ್ನಾಟಕ ರಾಜ್ಯ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ(ಎಲ್.ಪಿ.ಜಿ.) ಕೆ.ಶೈಲೇಂದ್ರ ಅವರು ಬಿವಿಎಸ್ ಎಂಟರ್ ಪ್ರೈಸಸ್ ನಲ್ಲಿ ಇದನ್ನು ಬಿಡುಗಡೆ ಮಾಡಿದರು.

‘ಚೋಟು’ ಸಿಲಿಂಡರ್ ಸುರಕ್ಷಿತವಾಗಿದ್ದು, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‍ಗಳು, ಇಂಡೇನ್ ಎಲ್.ಪಿ.ಜಿ. ವಿತರಕರು ಮತ್ತು ಡಿಪಾರ್ಟಮೆಂಟಲ್(ಕಿರಾಣಿ ಅಂಗಡಿ) ಸ್ಟೋರ್ಸ್‍ಗಳೂ ಸೇರಿದಂತೆ ಮಾರುಕಟ್ಟೆಯ ವಿವಿಧ ತಾಣಗಳಲ್ಲಿ ಲಭ್ಯವಾಗಲಿದೆ. ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದ್ದು, ಅಷ್ಟೇ ಸುಲಭವಾಗಿ ಬಳಸಬಹುದಾಗಿದೆ, ಕೇವಲ ಒಂದು ಗುರುತಿನ ಚೀಟಿಯ ಪುರಾವೆ ಸಲ್ಲಿಸಿ ಇದನ್ನು ಖರೀದಿಸಬಹುದಾಗಿದೆ ಮತ್ತು ಈ ಸಿಲಿಂಡರ್ ಪಡೆಯಲು ಯಾವುದೇ ವಿಳಾಸದ ಪುರಾವೆಯ ಅಗತ್ಯ ಇರುವುದಿಲ್ಲ.

ಈ ಸಿಲಿಂಡರ್ ಗಳು ಸಣ್ಣ ಪ್ರಮಾಣದ ಅಡುಗೆ ಮಾಡುವವರು, ಹಾಸ್ಟೆಲ್‍ಗಳು, ಪಿಜಿಗಳಲ್ಲಿ ವಾಸಿಸುವ ಅವಿವಾಹಿತರು, ವಲಸೆ ಹೋಗುವ ಜನರಿಗೆ ಮತ್ತು ಮನೆಗಳಲ್ಲಿ ಸಣ್ಣ ಕಾರ್ಯಕ್ರಮ ಹಾಗೂ ಹಬ್ಬದ ಸಂದರ್ಭದಲ್ಲಿ ತುಂಬಾ ಉಪಯುಕ್ತವಾಗಲಿದೆ ಎಂದು ಇಂಡಿಯನ್ ಆಯಿಲ್ ಸಾಂಸ್ಥಿಕ ಸಂವಹನ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ನೂರಾನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News