ಮಹಿಳೆಯರಿಂದ ಅರ್ಜಿ ಆಹ್ವಾನ

Update: 2020-12-19 16:54 GMT

ಉಡುಪಿ, ಡಿ.19: ಕೈಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿ ಯೋಜನೆಯಡಿ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಅಪರೇಟರ್ ತರಬೇತಿ ಪಡೆದ ಸಾಮಾನ್ಯ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಖರೀದಿಸಲು ಶೇ.50 ರಷ್ಟು ಸಹಾಯಧನದೊಂದಿಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನಿಧಿ ಯೋಜನೆಯನ್ನು ಮುಂದುವರಿಸಲಾಗಿದೆ. 

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡಲಾಗದ ಗ್ರಾಮೀಣ ಮಹಿಳೆ ಯರಿಗೆ ಸ್ವಯಂಉದ್ಯೋಗ ಕಲ್ಪಿಸಲು ರೂ. 30,000 ಘಟಕ ವೆಚ್ಚದಲ್ಲಿ ಒಂದು ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ ಖರೀದಿಸಲು ಶೇ. 50ರಷು್ಟ ಸಹಾಯಧನ ಒದಗಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ರಜತಾದ್ರಿ, ಮಣಿಪಾಲ, ಮೊಬೈಲ್ ಸಂಖ್ಯೆ:9481628584ನ್ನು ಸಂಪರ್ಕಿುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News