ಬಹುಕೋಟಿ ವಂಚನೆ ಪ್ರಕರಣ: ಅಜ್ಮೀರಾ ಕಂಪೆನಿಯ 8.41 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಈಡಿ
Update: 2020-12-22 20:16 IST
ಬೆಂಗಳೂರು, ಡಿ.22: ಅಜ್ಮೀರಾ ಕಂಪೆನಿಯಿಂದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ 8.41 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಈಡಿ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಜ್ಮೀರಾ ಕಂಪೆನಿಗೆ ಸೇರಿದ ಕೃಷಿ ಜಮೀನು, ರೆಸಿಡೆನ್ಸಿಯಲ್ ಪ್ಲಾಟ್, ಬ್ಯಾಂಕ್ ಖಾತೆಯಲ್ಲಿದ್ದ ಹಣ ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.
2019ರ ಜನವರಿಯಲ್ಲಿ ನಡೆದಿದ್ದ ಬಹುಕೋಟಿ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಹೂಡಿಕೆದಾರರು ಸಿಸಿಬಿಗೆ ದೂರು ನೀಡಿದ್ದರು. ಆಗ ಸುಮಾರು 400 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು.