ಸಾಲ ನೀಡುವ ನಕಲಿ ಆ್ಯಪ್‍ಗಳ ಮೇಲೆ ಕ್ರಮ: ಸಿಸಿಬಿ

Update: 2020-12-23 18:03 GMT

ಬೆಂಗಳೂರು, ಡಿ.23: ಆನ್‍ಲೈನ್ ಮೂಲಕ ನಕಲಿ ಆ್ಯಪ್‍ಗಳನ್ನು ಸೃಷ್ಟಿಸಿ ಸಾಲ ನೀಡುವುದಾಗಿ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಸಿಬಿ ತಿಳಿಸಿದೆ.

ಬುಧವಾರ ಈ ಕುರಿತು ಪ್ರತಿಕ್ರಿಯಿಸಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸದ್ಯ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಮೂರು ಆನ್‍ಲೈನ್ ಸಾಲದ ಹೆಸರಿನ ಆ್ಯಪ್ ಕಂಪೆನಿಗಳ ವಿರುದ್ಧ ಮೊಕದ್ದಮೆ ದಾಖಲಾಗಿಸಲಾಗಿದೆ ಎಂದರು.

ಕೆಲ ಆನ್‍ಲೈನ್ ಆ್ಯಪ್‍ಗಳು ಆರ್‍ಬಿಐ ನಿಯಮ ಉಲ್ಲಂಘಿಸಿ ಮುಂಗಡಹಣ ಸಾಲ ನೀಡುತ್ತಿದ್ದವು. ಅಷ್ಟೇ ಅಲ್ಲದೆ, ಮರುಪಾವತಿ ವೇಳೆ ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ಈ ರೀತಿ ತೊಂದರೆಗೆ ಸಿಲುಕಿದ್ದರೆ, ಸಿಸಿಬಿ ಕಚೇರಿಗೆ ದೂರು ಸಲ್ಲಿಸುವಂತೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News