ಆರು ತಿಂಗಳ ಮಗು ಮಾರಾಟಕ್ಕೆ ಮುಂದಾದ ಆರೋಪ: ತಂದೆ ವಿರುದ್ಧ ಮೊಕದ್ದಮೆ ದಾಖಲು
Update: 2020-12-25 23:20 IST
ಬೆಂಗಳೂರು, ಡಿ.25: ಆರು ತಿಂಗಳ ಗಂಡು ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಆರೋಪದಡಿ ತಂದೆ ವಿರುದ್ಧ ಇಲ್ಲಿನ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಶರಣಪ್ಪ ಎಂಬಾತನ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಈತ ಡಿ.24ರಂದು ತನ್ನ 6 ತಿಂಗಳ ಗಂಡು ಮಗುವನ್ನು ಮಾರಾಟ ಮಾಡಲು ಹೊರಟಿದ್ದ. ಇದನ್ನು ತಡೆದ ಪತ್ನಿ ಲಕ್ಷ್ಮೀ ಮೇಲೂ ಹಲ್ಲೆ ನಡೆಸಿರುವ ಘಟನೆ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ದೂರು ದಾಖಲು ಮಾಡಲಾಗಿದೆ.