ಶೌಚಾಲಯದಲ್ಲಿ ಮಹಿಳಾ ಪೇದೆಯ ಮೊಬೈಲ್ ಸಂಖ್ಯೆ ಬರೆದು ಕಿರುಕುಳ: ಓರ್ವನ ಬಂಧನ

Update: 2020-12-26 17:03 GMT

ಬೆಂಗಳೂರು, ಡಿ.26: ಸಾರ್ವಜನಿಕ ಶೌಚಾಲಯದಲ್ಲಿ ಮಹಿಳಾ ಪೊಲೀಸ್ ಪೇದೆಯ ಮೊಬೈಲ್ ಸಂಖ್ಯೆ ಬರೆದು, ಕಿರುಕುಳ ನೀಡಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಡೂರು ತಾಲೂಕಿನ ಚಿಕ್ಕಂಗಳದ ಸಿ.ಎಂ.ಸತೀಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಯಲಹಂಕದ ಉಪನಗರ ಪೊಲೀಸ್ ಠಾಣೆಯ ಎಸಿಪಿಸಹಾಯಕ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೇದೆಯ ಪರಿಚಯಸ್ಥನಾಗಿರುವ ಆರೋಪಿ ಸತೀಶ್, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ಮಹಿಳಾ ಪೇದೆಯ ಮೊಬೈಲ್ ಸಂಖ್ಯೆ ಬರೆದು, ಲೈಂಗಿಕ ಕಾರ್ಯಕರ್ತೆಯನ್ನು ಸಂಪರ್ಕಿಸಿ ಎಂದು ಉಲ್ಲೇಖಿಸಿದ್ದ ಎನ್ನಲಾಗಿದೆ. ತದನಂತರ, ದಿನೇ ದಿನೇ ಸಾಕಷ್ಟು ಅನಾಮಧೇಯ ಮೊಬೈಲ್ ಕೆರೆಗಳು ಮಹಿಳಾ ಪೇದೆಗೆ ಬರಲು ಆರಂಭವಾದಾಗ ಆತಂಕಗೊಂಡು ಯಲಹಂಕ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೃತ್ಯವೆಸಗಿದ ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News