ಎರಡನೇ ಹಂತದ ಚುನಾವಣೆ : ಶೇ.80.70 ರಷ್ಟು ಮತದಾನ
Update: 2020-12-27 21:57 IST
ಬೆಂಗಳೂರು, ಡಿ.27 : ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆಯು ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುಕ್ತಾಯಗೊಂಡಿದ್ದು, ಶೇ.80.71 ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ದೃಢಪಡಿಸಿದೆ.
ಜಿಲ್ಲಾವಾರು ಮತದಾನದ ವಿವರ(ಶೇಖಡವಾರು): ಬೆಂಗಳೂರು ನಗರ 67.48, ಬೆಂಗಳೂರು ಗ್ರಾಮಾಂತರ 91.86, ರಾಮನಗರ 88.27, ಚಿತ್ರದುರ್ಗ 85.34, ದಾವಣಗೆರೆ 85.36, ಕೋಲಾರ 86.51, ಚಿಕ್ಕಬಳ್ಳಾಪುರ 89.58, ಶಿವಮೊಗ್ಗ 80.91, ತುಮಕೂರು 86.87, ಮೈಸೂರು 81.17, ದಕ್ಷಿಣ ಕನ್ನಡ 78.67, ಉಡುಪಿ 75.42, ಕೊಡಗು 69.51, ಹಾಸನ 83.72, ಮಂಡ್ಯ 88.13, ಚಾಮರಾಜನಗರ 82.88, ಬೆಳಗಾವಿ 82.70, ವಿಜಯಪುರ 69.75, ಬಾಗಲಕೋಟೆ 79.67, ಧಾರವಾಡ 79.50, ಗದಗ 80.42, ಹಾವೇರಿ 85.13, ಉತ್ತರ ಕನ್ನಡ 80.58, ಕಲಬುರಗಿ 74.55, ಬೀದರ್ 72.24, ಬಳ್ಳಾರಿ 81.10, ರಾಯಚೂರು 77.11, ಯಾದಗಿರಿ 70.25, ಕೊಪ್ಪಳ 81.99 ಮತದಾನವಾಗಿದೆ ಎಂದು ಆಯೋಗವು ತಿಳಿಸಿದೆ.