ಪಿ. ಧರ್ಮಪಾಲ್

Update: 2020-12-27 16:52 GMT

ಪಡುಬಿದ್ರಿ : ಯೂನಿಯನ್ ಬ್ಯಾಂಕ್‍ನ ಡಿಜಿಎಮ್ ಹಾಗೂ ಮೊಗವೀರ ಬ್ಯಾಂಕ್‍ನ ವೈಸ್ ಚೇರ್‍ಮೆನೆ ಆಗಿದ್ದ ಪಿ.ಧರ್ಮಪಾಲ್ (76) ಹೃದಯಾಘಾತದಿಂದ ರವಿವಾರ ಪಡುಬಿದ್ರಿ-ಕಾಡಿಪಟ್ಣದ ಅವರ ಸ್ವಗೃಹ ಗುಡ್ಡೆ ಹೌಸ್‍ನಲ್ಲಿ ನಿಧನರಾದರು.

ಕಾಡಿಪಟ್ಣ ಮೊಗವೀರ ಮಹಾಸಭಾದ ಮುಂಬೈ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು 9 ಹ್ಯಾಂಡ್ಸ್ ಫೌಂಡೇಶನ್ ಸಕ್ರಿಯ ಸದಸ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವಿಭಕ್ತ ಕುಟುಂಬ ಪದ್ಧತಿಯ ಪ್ರಬಲ ಪ್ರತಿಪಾದಕರಾಗಿದ್ದ ಅವರು ಕುಟುಂಬ ಸದಸ್ಯರನ್ನು ಒಗ್ಗೂಡಿಸುವಲ್ಲಿ ಸಫಲರಾಗಿದ್ದರು. ಕೋಟ್ಯಾನ್‍ ಕಾರ್ ಮೂಲಸ್ಥಾನದ ಮುಂಬೈ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಪುತ್ರಿ, ಪುತ್ರರನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ