12 ವರ್ಷಕ್ಕಿಂತ ಮೇಲ್ಮಟ್ಟ ಮಕ್ಕಳಿಗೆ ಕೋವಾಕ್ಸಿನ್ ಪ್ರಯೋಗಕ್ಕೆ ಅನುಮತಿ

Update: 2021-01-04 07:51 GMT

ಹೊಸದಿಲ್ಲಿ: ಕೋವಿಡ್-19 ಲಸಿಕೆಯನ್ನು  ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ದ ಬಳಕೆಗೆ ಅನುಮೋದನೆ ಪಡೆದಿರುವ ಭಾರತ್ ಬಯೋಟೆಕ್ ಸಂಸ್ಥೆಗೆ 12 ವರ್ಷಕ್ಕಿಂತ ಮೇಲ್ಮಟ್ಟ ಮಕ್ಕಳಿಗೆ ತನ್ನ ಪ್ರಯೋಗಗಳನ್ನು ನಡೆಸಲು ಡಿಸಿಜಿಐ ಅನುಮತಿ ನೀಡಿದೆ. 
ಲಸಿಕೆಯನ್ನು ಈಗಾಗಲೇ ಕೊನೆಯ ಸುತ್ತಿನಲ್ಲಿ 12 ವರ್ಷಕ್ಕಿಂತ ಮೇಲ್ಮಟ್ಟ ಮಕ್ಕಳಿಗೆ ಬಳಸಲಾಗಿದ್ದು, ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ಹೈದರಾಬಾದ್ ಮೂಲದ ಸಂಸ್ಥೆ 3ನೇ ಹಂತದ ಪ್ರಯೋಗಗಳನ್ನು ನಡೆಸುತ್ತಿದೆ. ಇಲ್ಲಿಯ ತನಕ ವಯಸ್ಕರಿಗೆ ಮಾತ್ರ ಚುಚ್ಚುಮದ್ದು ಅಭಿಯಾನ ನಡೆಸಲು ಮಾತ್ರ ಉದ್ದೇಶಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಸಾಕಷ್ಟು ದತ್ತಾಂಶ ಲಭಿಸಿದರೆ ಭವಿಷ್ಯದಲ್ಲಿ ಇದನ್ನು ಮಕ್ಕಳಿಗೆ ಸಂಪೂರ್ಣವಾಗಿ ವಿಸ್ತರಿಸುವ ವಿಶ್ವಾಸವಿದೆ.
ಕೋವಾಕ್ಸಿನ್ ನ ತುರ್ತು ಅನುಮೋದನೆಯು ಸೀರಮ್ ಇನ್ಸ್‍ಸ್ಟಿಟ್ಯೂಟ್ ನ ಕೋವಿಶೀಲ್ಡ್ ಗಿಂತ ಭಿನ್ನವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ರವಿವಾರ ಸ್ಪಷ್ಟಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News