ಮೂರನೇ ಟೆಸ್ಟ್: ಭಾರತ ವಿರುದ್ಧ ಆಸೀಸ್‌ಗೆ ಬೃಹತ್ ಮುನ್ನಡೆ

Update: 2021-01-10 04:21 GMT

ಸಿಡ್ನಿ, ಜ.10: ಪ್ರವಾಸಿ ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 395 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಸ್ಪಷ್ಟ ಮೇಲುಗೈ ಸಾಧಿಸಿದೆ.

ಸ್ಟೀವನ್ ಸ್ಮಿತ್ (81) ಮತ್ತು ಮರ್ನಸ್ ಲಂಬುಶೆನ್ (73) ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 301 ರನ್ ಗಳಿಸಿದೆ. ಕ್ಯಾಮರೂನ್ ಗ್ರೀನ್ (ನಾಟೌಟ್ 74) ಮತ್ತು ಟಿಮ್ ಪೈನ್ (ನಾಟೌಟ್ 38) ಕ್ರೀಸ್‌ನಲ್ಲಿದ್ದಾರೆ. . ಭಾರತದ ಪರ ಅಶ್ವಿನ್ (85ಕ್ಕೆ 2) ಮತ್ತು ನವದೀಪ್ ಸೈನಿ (47ಕ್ಕೆ 2) ಯಶಸ್ವಿ ಬೌಲರ್‌ಗಳೆನಿಸಿದರು. ಮುಹಮ್ಮದ್ ಸಿರಾಜ್ 63 ರನ್ ನೀಡಿ ಒಂದು ವಿಕೆಟ್ ಕಿತ್ತರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ- 338 ಮತ್ತು 5 ವಿಕೆಟ್ ನಷ್ಟಕ್ಕೆ 295. ಭಾರತ- ಮೊದಲ ಇನಿಂಗ್ಸ್ 244.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News