ಕಳವು ಪ್ರಕರಣದ ಆರೋಪಿ ಬಂಧನ: 900 ಗ್ರಾಂ ಚಿನ್ನಾಭರಣ ಜಪ್ತಿ

Update: 2021-01-11 17:43 GMT

ಬೆಂಗಳೂರು, ಜ.11: ಕಳವು ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿರುವ ನಗರದ ಈಶಾನ್ಯ ವಿಭಾಗದ ಪೊಲೀಸರು, 45 ಲಕ್ಷ ರೂ. ಬೆಲೆಬಾಳುವ 900 ಗ್ರಾಂ ಚಿನ್ನಾಭರಣ, ಬೈಕ್‍ವೊಂದನ್ನು ಜಪ್ತಿ ಮಾಡಲಾಗಿದೆ.

ಕೆಜಿಹಳ್ಳಿ ನಿವಾಸಿ ಶೋಹೇಬ್ ಖಾನ್(30) ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ 10ಕ್ಕೂ ಹೆಚ್ಚು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ವಾರ್ಷಿಕ ಸಾಲಿನ ನ.3ರಂದು ಇಲ್ಲಿನ ಶಾರದ ನಗರದ ಅನಿಲ್ ಕುಮಾರ್ ಎಂಬವರ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದ ಆರೋಪಿ ಶೋಹೇಬ್, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿಂದೆಯೂ ಆರೋಪಿ ಬೀದರ್ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸಿಲುಕಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ. ತದನಂತರವೂ ತೆಲಗಾಂಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಲ್ಲೂ ಕಳವು ಪ್ರಕರಣಗಳು ಭಾಗಿಯಾಗಿದ್ದ. ಹೀಗೆ, ವಿವಿಧೆಡೆ ಈತನ ವಿರುದ್ಧ 10 ಕನ್ನಕಳವು ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News