ಬಾಲನ್ಯಾಯ ಕಾಯ್ದೆ-2015ರ ಅನ್ವಯ ಬಾಲಾಪರಾಧಿ ಎಂದು ಸಂಬೋಧಿಸುವಂತಿಲ್ಲ

Update: 2021-01-12 14:21 GMT

ಬೆಂಗಳೂರು, ಜ.12: ಮಕ್ಕಳ ರಕ್ಷಣಾ ನಿರ್ದೇಶನಾಲಯವು, ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರ ಅನ್ವಯ ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳು ಯಾವುದಾದರೂ ಅಪರಾಧ ಪ್ರಕರಣದಲ್ಲಿ ಸಿಕ್ಕಿಕೊಂಡಾಗ ಅವರನ್ನು ಬಾಲಾಪರಾಧಿ ಎಂದು ಸಂಬೋಧಿಸುವಂತಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳನ್ನು ಬಾಲಪರಾಧಿಗಳು ಎಂದು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳನ್ನು ಸುಧಾರಣಾ ಸಂಸ್ಥೆಗಳು ಕರೆಕ್ಷನಲ್ ಹೋಮ್ಸ್ ಎಂದು ಕರೆಯುವುದು ತಪ್ಪಾಗುತ್ತದೆ. ಹೀಗಾಗಿ, ಮಾಧ್ಯಮಗಳಲ್ಲಿ ಬಾಲಪರಾಧಿಗಳು ಎಂದು ಸಂಬೋಧಿಸುವಂತಿಲ್ಲ. ಅದರ ಬದಲು ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಎಂದು ಸಂಬೋಧಿಸಬಹುದು. ಸುಧಾರಣಾ ಸಂಸ್ಥೆಗಳು(ಕರೆಕ್ಷನ್ ಹೋಮ್ಸ್) ಎಂದು ಸಂಬೋಧಿಸುವ ಬದಲು ಮಕ್ಕಳ ಪಾಲನಾ ಸಂಸ್ಥೆಗಳು ಎಂದು ಹೇಳಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News