ಸರಕಾರದ ಅಧಿಕೃತ ಲಾಂಛನದಲ್ಲಿ ಕನ್ನಡ ಭಾಷೆ ಕಣ್ಮರೆ: ಕಿಟ್ಟೆಲ್ ಫೌಂಡೇಷನ್ ಆಕ್ಷೇಪ

Update: 2021-01-14 17:45 GMT

ಬೆಂಗಳೂರು, ಜ. 14: ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ನೀಡಲಾಗಿದೆ. ಆದರೆ, ರಾಜ್ಯ ಸರಕಾರ ಅಧಿಕೃತ ಲಾಂಛನದಲ್ಲಿ ಕನ್ನಡ ಭಾಷೆ ಕಣ್ಮರೆಯಾಗಿದೆ ಎಂದು ರೆ.ಫರ್ಡಿನ್ಯಾಂಡ್ ಕಿಟ್ಟೆಲ್ ಫೌಂಡೇಷನ್ ಅಧ್ಯಕ್ಷ ಅಂತೋಣಿ ಆರೋಪಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅಂತೋಣಿ ಅವರು, ರಾಜ್ಯ ಸರಕಾರದ ಅಧಿಕೃತ ಲಾಂಛನದಲ್ಲಿ ಹಿಂದಿ ಭಾಷೆಯಲ್ಲಿ ‘ಸತ್ಯಮೇವ ಜಯತೆ' ಎಂದು ಇದೆ. ಅದನ್ನು ‘ಸತ್ಯವೊಂದೇ ಗೆಲ್ಲುವುದು' ಎಂದು ಕನ್ನಡದಲ್ಲಿ ಬರೆಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಲ್ಲದೆ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪುರಸ್ಕಾರಗಳು ಸಂದಿದ್ದು, ನಮ್ಮ ಕನ್ನಡ ಭಾಷೆಯನ್ನು ಕರ್ನಾಟಕದ ಆಡಳಿತ ಭಾಷೆ ಎಂದು ಘೋಷಿಸಲಾಗಿದೆ. ಆದರೂ, ಸರಕಾರದ ಲಾಂಛನದಲ್ಲಿ ಹಿಂದಿ ಘೋಷವಾಕ್ಯ ಸರಿಯಲ್ಲ. ಕೂಡಲೇ ಇದನ್ನು ಬದಲಾಯಿಸಿ ಕನ್ನಡದಲ್ಲಿ ಬರೆಸಬೇಕು ಎಂದು ಅಂತೋಣಿ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News