ನಾಲ್ಕನೇ ಟೆಸ್ಟ್ ಗೆ ಮಳೆ ಅಡ್ಡಿ: ಭಾರತ 62/2

Update: 2021-01-16 08:06 GMT

ಬಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯದ ನಡುವೆ ಇಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಟೀ ವಿರಾಮದ ಬಳಿಕ ಜೋರಾಗಿ ಮಳೆ ಸುರಿದ ಪರಿಣಾಮ 2ನೇ ದಿನದಾಟ ಬೇಗನೆ ಕೊನೆಗೊಂಡಿದೆ.
ಆಟ ಸ್ಥಗಿತಗೊಂಡಾಗ ಭಾರತ ಮೊದಲ ಇನಿಂಗ್ಸ್ ನಲ್ಲಿ 26 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ.
ಆರಂಭಿಕ ಆಟಗಾರ ರೋಹಿತ್ ಶರ್ಮಾ 44 ರನ್ (74 ಎಸೆತ, 6 ಬೌಂಡರಿ)ಗಳಿಸಿ ಔಟಾಗಿದ್ದಾರೆ. ಶುಭಮನ್ ಗಿಲ್  7 ರನ್ ಗಳಿಸಿ ನಿರಾಸೆಗೊಳಿಸಿದರು. ಚೇತೇಶ್ವರ ಪೂಜಾರ(8) ಹಾಗೂ ನಾಯಕ ಅಜಿಂಕ್ಯ ರಹಾನೆ (02)ಕ್ರೀಸ್ ಕಾಯ್ದಕೊಂಡಿದ್ದಾರೆ.
ಇದಕ್ಕೂ ಮೊದಲು 5 ವಿಕೆಟ್ ನಷ್ಟಕ್ಕೆ 274 ರನ್‍ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ 115.2 ಓವರ್ ಗಳಲ್ಲಿ  369 ರನ್ ಗಳಿಸಿ ಆಲೌಟಾಯಿತು. 2ನೇ ದಿನದಾಟದಲ್ಲಿ ನಾಯಕ ಟಿಮ್ ಪೈನ್ ಅರ್ಧಶತಕ(50)ಗಳಿಸಿದರು. ಕ್ಯಾಮರೊನ್ ಗ್ರೀನ್ 47, ಲಿಯೊನ್ 24 ಹಾಗೂ ಸ್ಟಾರ್ಕ್ 20 ರನ್ ಗಳಿಸಿದರು.
ಭಾರತದ ಪರ ನಟರಾಜನ್(3-78), ಶಾರ್ದೂಲ್ ಠಾಕೂರ್(3-94) ಹಾಗೂ ವಾಷಿಂಗ್ಟನ್ ಸುಂದರ್(3-89)ತಲಾ 3 ವಿಕೆಟ್ ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News