ಸಹೋದ್ಯೋಗಿಗಳಿಂದ ದಾಳಿ; 12 ಬಾಡಿಗೆ ಸೈನಿಕರ ಸಾವು

Update: 2021-01-16 16:41 GMT
ಸಾಂರ್ದಭಿಕ ಚಿತ್ರ

ಕಾಬೂಲ್ (ಅಫ್ಘಾನಿಸ್ತಾನ), ಜ. 16: ಅಫ್ಘಾನಿಸ್ತಾನದ ಹೆರಾತ್ ಪ್ರಾಂತದಲ್ಲಿ ಶುಕ್ರವಾರ ಬಾಡಿಗೆ ಸೇನೆಯೊಂದರ ಇಬ್ಬರು ಸೈನಿಕರು ತಮ್ಮ ಸಹೋದ್ಯೋಗಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.

ಬಾಡಿಗೆ ಸೈನಿಕರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ಹಂತಕರು ಪರಾರಿಯಾಗಿದ್ದಾರೆ ಎಂದು ಹೆರಾತ್ ಪೊಲೀಸ್ ವಕ್ತಾರ ಅಬ್ದುಲ್ ಅಹದ್ ವಾಲಿಝಾದ ಶನಿವಾರ ತಿಳಿಸಿದರು. ಬಳಿಕ, ಅಫ್ಘಾನ್ ಸರಕಾರಿ ಸೈನಿಕರು ಈ ಪ್ರದೇಶದ ನಿಯಂತ್ರಣವನ್ನು ತೆಗೆದುಕೊಂಡರು ಎಂದರು.

ತಾಲಿಬಾನ್ ವಕ್ತಾರ ಯೂಸುಫ್ ಅಹ್ಮದಿ ಟ್ವೀಟೊಂದರಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎಂದು ತಿಳಿದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News