ಒಡಿಶಾ ಸಾಂಸ್ಕೃತಿಕ ಸೊಬಗಿಗೆ ಮಾರುಹೋದ ಡಾ.ಅಶ್ವತ್ಥ ನಾರಾಯಣ

Update: 2021-01-17 17:03 GMT

ಬೆಂಗಳೂರು, ಜ. 17: ಸಾಂಪ್ರದಾಯಿಕ ಹಾಗೂ ಜಾನಪದ ಕಲೆಗಳ ಅಲ್ಲದೆ, ಅತ್ಯಂತ ಮನಮೋಹಕವಾದ ಜವಳಿ ಉತ್ಪನ್ನಗಳ ತಯಾರಿಕೆಯಲ್ಲೂ ಒಡಿಶಾ ಮುಂಚೂಣಿಯಲ್ಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದಿಲ್ಲಿ ಶ್ಲಾಘಿಸಿದ್ದಾರೆ.

ರವಿವಾರ ನಗರದಲ್ಲಿ ಒಡಿಶಾದ ಸಂಸದ ಡಾ.ಅಚ್ಯುತ ಸಮಂತ ಅವರ ‘ಸಮಂತಾಸ್' ಲಕ್ಷ್ಯುರಿ ಡಿಸೈನರ್ ಹೌಸ್ ಏರ್ಪಡಿಸಿದ್ದ ವಸ್ತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಉನ್ನತ ಸಾಧನೆ ಮಾಡಿರುವ ಸಮಂತ ಅವರು ಇದೀಗ ಸಮಂತಾಸ್ ಬ್ರ್ಯಾಂಡ್ ಹೆಸರಿನಲ್ಲಿ ರಾಜ್ಯದಲ್ಲಿ ವಸ್ತ್ರ ಪ್ರದರ್ಶನ ಏರ್ಪಡಿಸಿರುವುದು ಸಂತಸದ ವಿಷಯ. ಕರ್ನಾಟಕ ಮತ್ತು ಒಡಿಶಾ ನಡುವೆ ಸಾಂಸ್ಕೃತಿಕತೆಯ ವಿನಿಮಯ ಆಗುತ್ತಿದೆ. ಆ ರಾಜ್ಯದ ಸಾಂಸ್ಕೃತಿಕ ವೈಭವಕ್ಕೆ ನಾನು ಮಾರು ಹೋಗಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಂತ ಅವರು ಒಡಿಶಾದ ಕಲಾ ಸೊಬಗನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಅನೇಕ ಕಲಾ ಪ್ರಕಾರಗಳಿಗೆ ಆ ರಾಜ್ಯ ಹೆಸರುವಾಸಿಯಾಗಿದೆ. ಅದೆಲ್ಲವೂ ಇಲ್ಲಿ ಕಾಣುತ್ತಿದೆ ಎಂದರು. ಒಡಿಶಾ ಕಳಿಂಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಚ್ಯುತ ಸಮಂತ, ಸಂಸದ ತೇಜಸ್ವಿ ಸೂರ್ಯ, ಶಿಕ್ಷಣ ತಜ್ಞ ಡಾ.ವೊಡೆ ಕೃಷ್ಣ, ಚಲನಚಿತ್ರ ನಿರ್ದೇಶಕ ಶೇಷಾದ್ರಿ, ಪತ್ರಕರ್ತ ವಿಶ್ವೇಶ್ವರ ಭಟ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News