ಎಟಿಎಂನಲ್ಲಿ ಹಣ ಕಳವು ಪ್ರಕರಣ : ವಿದೇಶಿ ಮಹಿಳೆ ಸೆರೆ

Update: 2021-01-17 17:07 GMT

ಬೆಂಗಳೂರು, ಜ.17: ಎಟಿಎಂ ಯಂತ್ರಗಳಿಗೆ ಡಿವೈಸ್ ಅಳವಡಿಸಿ ವಿವಿಧ ಗ್ರಾಹಕರ ಖಾತೆಗಳಿಂದ 17ಲಕ್ಷ ರೂ. ಕಳವು ಮಾಡಿದ್ದ ವಿದೇಶಿ ಮಹಿಳೆಯನ್ನು ಇಲ್ಲಿನ ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸ್ಪೇನ್ ದೇಶದ ಸೇಫಿನಿ ಬಂಧಿತ ವಿದೇಶಿ ಮಹಿಳೆ ಎಂದು ಗುರುತಿಸಲಾಗಿದೆ. ಶಿವರಾಮ ಕಾರಂತ ನಗರದ ಎಸ್‍ಬಿಐ ಎಟಿಎಂಗೆ 1500 ರೂ. ಪಡೆಯಲು ಹೋಗಿದ್ದ ಗ್ರಾಹಕರಿಗೆ ಎಟಿಎಂನಿಂದ 1 ಲಕ್ಷ ಹಣ ಬಂದಿದ್ದು ಕಂಡು ಗಾಬರಿಯಾಗಿದೆ. ಆತ ತಕ್ಷಣ ಬ್ಯಾಂಕ್ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 

ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ಶೋಧ ನಡೆಸಿ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News