ಖತೀಬ್ ಅಬು ಮುಹಮ್ಮದ್

Update: 2021-01-20 12:03 GMT

ಕುಂದಾಪುರ, ಜ.20: ಸ್ಥಳೀಯ ಜಾಮಿಯಾ ಮಸೀದಿಯ ಮಾಜಿ ಖತೀಬರು, ಹಿರಿಯ ಮುಸ್ಲಿಂ ಧುರೀಣರು, ವಿದ್ವಾಂಸರು ಆಗಿದ್ದ ಖತೀಬ್ ಅಬು ಮುಹಮ್ಮದ್ (84) ನಗರದ ಫೆರಿ ರಸ್ತೆಯ ಮಸೀದಿ ಮುಂಭಾಗದಲ್ಲಿರುವ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಆಸೌಖ್ಯದಿಂದ ಬುಧವಾರ ನಿಧನ ಹೊಂದಿದರು.

ಅವರು ಪತ್ನಿ, ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 70ರ ದಶಕದಲ್ಲಿ ಕುಂದಾಪುರ ಜಾಮಿಯಾ ಮಸೀದಿಯ ಖತೀಬರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ತನ್ನ ಅದ್ಭುತ ಕಂಠದ ನಮಾಝ್, ಪ್ರವಚನಗಳಿಂದ ಜನಜನಿತರಾಗಿದ್ದರು.

ಕುಂದಾಪುರದಲ್ಲಿ ಸೇತುವೆ ನಿರ್ಮಾಣಗೊಳ್ಳುವ ಮುನ್ನ ಫೆರಿ ರಸ್ತೆಯ ಕಳವಿನ ಬಾಗಿಲಿನ ಮೂಲಕ ಗಂಗೊಳ್ಳಿಗೆ ಬೋಟಿನಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಿರಿಮೆಯೂ ಇವರಿಗಿದೆ. ನಂತರ ವಿದೇಶ ಸೇರಿಕೊಂಡ ಇವರು ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ಹತ್ತು ಹಲವು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ, ಪದಾಧಿಕಾರಿಯಾಗಿ ಅಬು ಮುಹಮ್ಮದ್ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ