ಅಸ್ಸಾಂನಲ್ಲಿ ಸ್ವಾತಂತ್ರ್ಯ ಬಳಿಕವೂ ಲಕ್ಷಾಂತರ ಜನರು ಭೂರಹಿತರಾಗಿದ್ದಾರೆ: ಪ್ರಧಾನಿ ಮೋದಿ

Update: 2021-01-23 08:23 GMT

ಗುವಾಹಟಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಅಸ್ಸಾಂನ ಶಿವಸಾಗರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯ  ಜನರಿಗೆ ಭೂ ಹಂಚಿಕೆಯ ಪ್ರಮಾಣಪತ್ರಗಳನ್ನು ವಿತರಿಸಿದರು. 

ಸ್ವಾತಂತ್ರ್ಯದ ದಶಕಗಳ ಬಳಿಕವೂ ಲಕ್ಷಾಂತರ ಆದಿವಾಸಿಗಳು, ಸ್ಥಳೀಯ ಅಸ್ಸಾಮಿ ಕುಟುಂಬಗಳು ಭೂ ಮಾಲೀಕತ್ವದ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

1.06 ಲಕ್ಷ ಭೂರಹಿತ ಸ್ಥಳೀಯ ಅಸ್ಸಾಮಿ ಕುಟುಂಬಗಳಿಗೆ ಭೂಮಿಯ ದಾಖಲೆ ಪತ್ರಗಳನ್ನು ವಿತರಿಸಿದರು.
ಅಸ್ಸಾಂನಲ್ಲಿ ಬಿಜೆಪಿ ಸರಕಾರ ರಚಿಸಿದಾಗ ಅಸ್ಸಾಂನಲ್ಲಿ ಸುಮಾರು 6 ಲಕ್ಷ ಭೂರಹಿತ ಜನರಿದ್ದರು. ಆದರೆ ಸರ್ಬಾನಂದ ಸೋನೊವಾಲ್ ಸರಕಾರವು ಆ ಭೂರಹಿತ ಜನರಿಗೆ ಭೂ ದಾಖಲೆ ಪತ್ರಗಳನ್ನು ಒದಗಿಸುತ್ತಿದೆ. 2.25 ಲಕ್ಷಕ್ಕೂ ಹೆಚ್ಚು ಭೂರಹಿತ ಜನರು ದಾಖಲೆ ಪತ್ರಗಳನ್ನು ಪಡೆದಿದ್ದರು. ಈಗ 1 ಲಕ್ಷ ಜನರನ್ನು ಸೇರಿಸಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News