ಜಯಲಲಿತಾ ಆಪ್ತೆ ಶಶಿಕಲಾ ಆರೋಗ್ಯ ಸ್ಥಿರ

Update: 2021-01-25 14:27 GMT

ಬೆಂಗಳೂರು, ಜ.25: ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ.ಶಶಿಕಲಾ ನಟರಾಜನ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಉಸಿರಾಟ ಸಾಮಾನ್ಯವಾಗಿದ್ದು, ಜ್ವರವೂ ತಗ್ಗಿದೆ. ಆದರೆ, ಕೃತಕ ಉಸಿರಾಟ ವ್ಯವಸ್ಥೆ ಮುಂದುವರಿಸಲಾಗಿದೆ. ಈ ಮೂಲಕ ಕೊರೋನ ಸೋಂಕಿನ ಗುಣಲಕ್ಷಣಗಳು ಕ್ಷೀಣಿಸಿವೆ. ಆಸ್ಪತ್ರೆಯಿಂದ ನೀಡಲಾಗುವ ಆಹಾರ ಸೇವನೆ ಮಾಡಿ ಕೋವಿಡ್ ಐಸಿಯು ವಾರ್ಡ್‍ನಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News